ಮೈಸೂರು, ಮಾ.17(ಜಿಎ)- ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರವiದಿಂದ ಆಚರಿಸಲಾಗು ತ್ತಿದ್ದು, ಮೈಸೂರಿನಲ್ಲಿಯೂ ಹೋಳಿ ಹಬ್ಬ ರಂಗೇರಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಬಣ್ಣಗಳ ಹಬ್ಬ ಹೋಳಿಯನ್ನು ಅದ್ದೂರಿಯಾಗಿ ಆಚರಿ ಸಲಿಲ್ಲ. ಆದರೆ ಈ ವರ್ಷ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎರಡನೇ ದಿನವಾದ ನಾಳೆ (ಮಾ.18) ಮತ್ತಷ್ಟು ಅದ್ಧೂರಿಯಾಗಿ ಹೋಳಿ ಹಬ್ಬ ವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ. ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಶ್ರೀ ಆಯಿ ಮಾತಾಜೀಯವರ ದೇವಸ್ಥಾನದ ಆವರಣದಲ್ಲಿ ಸೀರ್ವಿ ಸಮಾಜದ ವತಿಯಿಂದ ಹೋಳಿ ಹಬ್ಬ ಆಚರಿ ಸಲಾಯಿತು….
ರಾಜ್ಯಾದ್ಯಂತ 18 ಮಂದಿ ಅಧಿಕಾರಿಗಳಿಗೆ ಂಅಃ ಶಾಕ್
March 17, 2022ಮೈಸೂರು,ಮಾ.16(ಆರ್‍ಕೆ)-ಮೈಸೂರಿನ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಎನ್.ಬಾಲಕೃಷ್ಣ, ಗುಂಡ್ಲುಪೇಟೆ ಅಬ ಕಾರಿ ಇನ್ಸ್‍ಪೆಕ್ಟರ್ ಚೆಲುವರಾಜು ಸೇರಿದಂತೆ ರಾಜ್ಯದ 18 ಅಧಿಕಾರಿಗಳ ಮನೆಗಳು ಸೇರಿದಂತೆ ಅವರಿಗೆ ಸಂಬಂಧಿಸಿ ದಂತಹ 75 ಸ್ಥಳಗಳಲ್ಲಿ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಅಧಿ ಕಾರಿಗಳು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. 100 ಮಂದಿ ಅಧಿಕಾರಿಗಳು 300 ಮಂದಿ ಸಿಬ್ಬಂದಿವುಳ್ಳ ಎಸಿಬಿ ಪೊಲೀಸರು ಇಂದು ಮುಂಜಾನೆ 6 ಗಂಟೆಗೆ ವಿವಿಧ ಸರ್ಕಾರಿ ಅಧಿಕಾರಿಗಳ ಮನೆ ಬಾಗಿಲು ತಟ್ಟಿದರು. ಇದರಿಂದ ಹಾಸಿಗೆ ಯಿಂದ ಏಳುವ ಮುನ್ನವೇ ಈ ಅಧಿಕಾರಿಗಳು…
ಇಂದು ಪುನೀತ್ ಹುಟ್ಟುಹಬ್ಬ
March 17, 2022ಮೈಸೂರು,ಮಾ.16(ಜಿಎ)-ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನಟನೆಯ ಕಡೆಯ ಚಿತ್ರ ‘ಜೇಮ್ಸ್’ ನಾಳೆ (ಮಾ.17) ರಾಜ್ಯ ಸೇರಿದಂತೆ ವಿಶ್ವದಾದ್ಯಂತ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರಿನ ಗಾಯತ್ರಿ ಮತ್ತು ರಾಜ್ ಕಮಲ್ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವನ್ನು ಗುರುವಾರ ಬೆಳಗ್ಗೆ 8ರಿಂದ ರಾತ್ರಿವರೆಗೆ 5 ಪ್ರದರ್ಶನಗಳನ್ನು ಪ್ರದ ರ್ಶಿಸುತ್ತಿದ್ದು, ಮೈಸೂರಿನ ಎಲ್ಲಾ ಚಿತ್ರ ಮಂದಿರಗಳಲ್ಲಿ ಎಲ್ಲಾ ಶೋಗಳ ಟಿಕೆಟ್ ಮುಗಿದು ಹೋಗಿದೆ ಎನ್ನಲಾಗಿದೆ. ಪುನೀತ್ ಅವರು…
ಲಕ್ಷಾಂತರ ಭಕ್ತ ಗಣ ನಡುವೆ ವಿಜೃಂಭಣೆಯಿಂದ ಜರುಗಿದ ನಂಜನಗೂಡು ಗೌತಮ ಪಂಚ ಮಹಾರಥೋತ್ಸವ
March 17, 2022ನಂಜನಗೂಡು, ಮಾ. 16- ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಯವರ ಗೌತಮ ಪಂಚ ಮಹಾರಥೋತ್ಸವವು ಬುಧವಾರ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯದೆ ನಿರಾಶೆಗೆ ಒಳಗಾಗಿದ್ದ ಲಕ್ಷಾಂತರ ಭಕ್ತಾದಿಗಳು ಶ್ರೀಕಂಠೇಶ್ವರನ ಪಂಚ ರಥಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು. ಜಾತ್ರೆ ಅಂಗವಾಗಿ ಬುಧವಾರ ಬೆಳಗ್ಗೆ 2 ಗಂಟೆಯಿಂದಲೇ ದೇವಾಲಯದಲ್ಲಿ ಮೊದಲು ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ, ಮಹೋನ್ನತ ಪೂರ್ವಕ ಏಕದಶಾವರ ರುದ್ರಾಭಿಷೇಕ, ಪ್ರಾತಃಕಾಲ ಪೂಜೆಯನ್ನು ನೆರವೇರಿಸಿ ನಂತರ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು. ನಂತರ…
ಚಾಮುಂಡಿಬೆಟ್ಟಕ್ಕೆ ರೋಪ್‍ವೇ, ರೈಲಿಂಗ್ ಅಳವಡಿಕೆಗೆ ತೀವ್ರ ವಿರೋಧ
March 16, 2022ಮೈಸೂರು, ಮಾ.15 (ಆರ್‍ಕೆಬಿ)- ಚಾಮುಂಡಿ ಬೆಟ್ಟದ ರೋಪ್‍ವೇ ಯೋಜನೆ ಮತ್ತು ಮೆಟ್ಟಿಲುಗಳಿಗೆ ರೈಲಿಂಗ್ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ಮೈಸೂರಿನ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಮೈಸೂರಿನ ರಾಮಕೃಷ್ಣ ಪರಮಹಂಸ ವೃತ್ತದ ಬಳಿಯ ರಾಮಕೃಷ್ಣ ಉದ್ಯಾನವನದಲ್ಲಿ ಮಂಗಳವಾರ ನಡೆದ ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ತುರ್ತು ಸಭೆಯಲ್ಲಿ ಇದಕ್ಕೆ ಭಾರೀ ವಿರೋಧ ಕೇಳಿಬಂದಿತು. ಸಮಿತಿಯ ಸಂಚಾಲಕ ಪರಶುರಾಮೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿ ಸಿದ್ದ ಪಾರಂ¥ರಿಕ ತಜ್ಞರು, ಪರಿಸರವಾದಿ ಗಳೂ, ವಿದ್ವಾಂಸರು, ನಿಸರ್ಗ ಪ್ರೇಮಿ ಗಳು, ಸಾರ್ವಜನಿಕರು ಚಾಮುಂಡಿಬೆಟ್ಟಕ್ಕೆ ರೋಪ್‍ವೇ…
ಇಂದು ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವ
March 16, 2022ನಂಜನಗೂಡು, ಮಾ.15- ದಕ್ಷಿಣಕಾಶಿ ನಂಜನ ಗೂಡಿನ ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋ ತ್ಸವ ನಾಳೆ(ಮಾ.16) ಮುಂಜಾನೆ 3.30 ರಿಂದ 4.30 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಗಳಿಂದ ದೇವಾಲಯದ ಒಳಾವರಣಕ್ಕೆ ಮಾತ್ರ ಸೀಮಿತ ವಾಗಿ ಭಕ್ತರ ಪಾಲಿಗೆ ಮರೀಚಿಕೆಯಾಗಿದ್ದ ದೊಡ್ಡ ಜಾತ್ರೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿ ಸಲು ದೇವಾಲಯ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ ನಡೆಸಲಾಗಿದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಮೂಲ ಸೌಕರ್ಯ…
ಮೈಸೂರು ವಿವಿಯಿಂದ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್
March 14, 2022ವಿಜ್ಞಾನಿ ಡಾ.ವಾಸುದೇವ್ ಕಲ್ಕುಂಟೆ ಅತ್ರೆ, ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿಗೂ ಡಾಕ್ಟರೇಟ್ ಮಾ.೨೨ರಂದು ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮೈಸೂರು, ಮಾ.೧೩(ಎಂಟಿವೈ)- ನಟನೆಯೊಂದಿಗೆ ಸಮಾಜ ಸೇವಾ ಕಾರ್ಯದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಮರಣೋತ್ತರವಾಗಿ ಹಾಗೂ ಡಿಆರ್‌ಡಿಒ ನಿವೃತ್ತ ಮಹಾ ನಿರ್ದೇಶಕ ಡಾ.ವಾಸು ದೇವ್ ಕಲ್ಕುಂಟೆ ಅತ್ರೆ ಮತ್ತು ಜಾನಪದ ಕಲಾವಿದ ಎಂ.ಮಹ ದೇವಸ್ವಾಮಿ(ಮಳವಳ್ಳಿ) ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದ್ದು, ಮಾ.೨೨ರಂದು ನಡೆಯಲಿರುವ ೧೦೨ನೇ…
ಮತ್ತೆ ಮುನ್ನೆಲೆಗೆ ೪ ಡಿಸಿಎಂ ಚರ್ಚೆ
March 14, 2022ಬೆಂಗಳೂರು, ಮಾ.೧೩- ರಾಜ್ಯದಲ್ಲಿ ೪ ಉಪಮುಖ್ಯ ಮಂತ್ರಿಗಳ ರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಲ್ಕು ಸಮುದಾಯಗಳಿಗೆ, ೪ ಪ್ರಾಂತ್ಯಗಳಿAದ ಪಟ್ಟ ಕಟ್ಟಲು ರಾಜ್ಯದಿಂದ ಕೇಂದ್ರದ ವರಿಷ್ಠರಿಗೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಲ್ವರು ಡಿಸಿಎಂಗಳು ಸಾಥ್ ಕೊಡಲು ಹೊಸ ಸೂತ್ರ ರೆಡಿಯಾಗುತ್ತಿದ್ದು, ಈ ಹೊಸ ಸೂತ್ರಕ್ಕೆ ಹೈಕಮಾಂಡ್ ಅಸ್ತು ಅನ್ನುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವದ ವ್ಯವಸ್ಥೆ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೊಮ್ಮಾಯಿ…
ತಿಂಗಳ ಅಂತ್ಯದಲ್ಲಿ ‘ನಂದಿನಿ’ ಹಾಲಿನ ದರ ಏರಿಕೆ?
March 14, 2022ಬೆಂಗಳೂರು, ಮಾ.೧೩- ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ‘ನಂದಿನಿ’ ಹಾಲಿನ ದರ ಹೆಚ್ಚಳ ಮಾಡುವ ಸಿದ್ಧತೆ ನಡೆಸಿದ್ದು, ಮಾರ್ಚ್ ಅಂತ್ಯ ದೊಳಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳು ಈಗಾಗಲೇ ಮನವಿ ಮಾಡಿ ದ್ದವು. ಆದರೆ, ಕೋವಿಡ್ ಮೂರನೇ ಅಲೆ, ಮತ್ತೊಮ್ಮೆ ಲಾಕ್‌ಡೌನ್ ಪ್ರಸ್ತಾಪ ದಿಂದ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿದ್ದರಿಂದ ಆ ಸಂದರ್ಭದಲ್ಲಿ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಈ ಮಧ್ಯೆ…
ಚಾಮುಂಡಿಬೆಟ್ಟದಲ್ಲಿ ರೋಪ್‌ವೇ, ಮೆಟ್ಟಿಲುಗಳಿಗೆ ರೇಲಿಂಗ್ ನಿರ್ಮಿಸುವ ಯೋಜನೆಗೆ ಭಾರೀ ವಿರೋಧ
March 14, 2022ಭಾರೀ ಗಾತ್ರದ ಕಂದಕಗಳ ತೋಡುವುದರಿಂದ ಬೆಟ್ಟಕ್ಕೆ ಅಪಾಯ ಮೈಸೂರು,ಮಾ.೧೩(ಆರ್‌ಕೆಬಿ)-ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಯೋಜನೆ ಮತ್ತು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವವರಿಗಾಗಿ ಮೆಟ್ಟಿಲುಗಳ ಎರಡೂ ಬದಿಯಲ್ಲಿ ರೇಲಿಂಗ್ ನಿರ್ಮಿ ಸುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ವಿರೋಧಿಸಿದ್ದಾರೆ. ಉದ್ದೇಶಿತ ರೋಪ್‌ವೇ, ರೇಲಿಂಗ್ ನಿರ್ಮಿ ಸುವುದರಿಂದ ಲಾಭಕ್ಕಿಂತ ಹೆಚ್ಚಾಗಿ ಪರಿಸರ ಮತ್ತು ಪ್ರಕೃತಿಗೆ ಮಾರಕವಾಗಲಿದೆ. ಅಭಿವೃದ್ಧಿ ಹೆಸರಿ ನಲ್ಲಿ ಚಾಮುಂಡಿಬೆಟ್ಟವನ್ನು ಹಾಳು ಮಾಡುವ ರಾಜಕೀಯ ಮುಖಂಡರ ನಡೆ ಸರಿಯಲ್ಲ ಎಂದು ಭಾನುವಾರ ಮುಂಜಾನೆ ಚಾಮುಂಡಿಬೆಟ್ಟದ ಪಾದದ ಬಳಿ…










