ಚಾಮುಂಡೇಶ್ವರಿ ದೇವಾಲಯದಲ್ಲಿ  ಈ ಬಾರಿ 33.30 ಕೋಟಿ ಆದಾಯ ಸಂಗ್ರಹ
ಮೈಸೂರು

ಚಾಮುಂಡೇಶ್ವರಿ ದೇವಾಲಯದಲ್ಲಿ ಈ ಬಾರಿ 33.30 ಕೋಟಿ ಆದಾಯ ಸಂಗ್ರಹ

April 5, 2019

ಮೈಸೂರು: ಪ್ರಸಿದ್ಧ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿರುವ ಚಾಮುಂಡಿಬೆಟ್ಟದ ಚಾಮುಂ ಡೇಶ್ವರಿ ದೇವಾಲಯದ ಆಡ ಳಿತ ಮಂಡಳಿಗೆ ಈ ಸಾಲಿನಲ್ಲಿ 33,30 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 3.30 ಕೋಟಿ ಅಧಿಕ ಸಂಗ್ರಹವಾಗಿದೆ.

ಕಳೆದ ವರ್ಷಕ್ಕಿಂತ ಈ ಸಾಲಿ ನಲ್ಲಿ ವಿವಿಧ ಸೇವಾ ಶುಲ್ಕಗಳ ಬೆಲೆ ಹೆಚ್ಚಳವಾಗಿದ್ದರೂ ಭಕ್ತರು ಮಾತ್ರ ಶುಲ್ಕ ಪಾವತಿಸಿ ವಿವಿಧ ಸೇವೆಯಲ್ಲಿ ಪಾಲ್ಗೊಂಡಿರುವುದರಿಂದ ದೇವಾಲಯಕ್ಕೆ ಕಳೆದ 5 ವರ್ಷಕ್ಕಿಂತ ಈ ಬಾರಿ ಅಧಿಕ ಆದಾಯ ಬಂದಿದೆ. 2014-15ನೇ ಸಾಲಿನಲ್ಲಿ 18,33,69,828 ರೂ. ಆದಾಯ ಸಂಗ್ರಹವಾಗಿತ್ತು. 2015-16ನೇ ಸಾಲಿನಲ್ಲಿ 21,74,00,250 ರೂ. ಆದಾಯ ಸಂಗ್ರಹ ವಾಗಿದ್ದರೆ, 2016-17ನೇ ಸಾಲಿನಲ್ಲಿ 24,09,53,742 ರೂ., 2017-18ನೇ ಸಾಲಿನಲ್ಲಿ 29,95,17,646, ಪ್ರಸಕ್ತ ಸಾಲಿನಲ್ಲಿ (2018-19) 33,30,68,162 ರೂ. ಆದಾಯ ಸಂಗ್ರಹವಾಗಿದೆ. ಕಳೆದ 2 ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಆಷಾಢ ಮಾಸದ ಶುಕ್ರ ವಾರ ಮತ್ತು ಅಮ್ಮನವರ ವರ್ಧಂತಿ ಮಹೋತ್ಸವದ ದಿನ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧವಿರುವುದರಿಂದ ಬೆಟ್ಟದ ತಪ್ಪಲಿನಿಂದ ಭಕ್ತರನ್ನು ಕರೆದೊಯ್ಯಲು ಉಚಿತ ಬಸ್ ವ್ಯವಸ್ಥೆ ಮಾಡುವುದಕ್ಕೆ ಸಾರಿಗೆ ಸಂಸ್ಥೆಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದಲೇ ಹಣ ವಿನಿಯೋಗಿಸುತ್ತಿರುವುದರಿಂದ 3 ವರ್ಷದ ಹಿಂದೆ ದೇವಾಲಯದಲ್ಲಿದ್ದ 103.20 ರೂ.ನಲ್ಲಿ ಇದೀಗ 81.78 ಕೋಟಿ ರೂ.ಗೆ ಬಂದು ನಿಂತಿದೆ.

ಈ ಸಾಲಿನಲ್ಲಿ ಸಂಗ್ರಹವಾದ ಆದಾಯದ ವಿವರ: ಒಟ್ಟು 26 ಸೇವೆ ಮತ್ತು ಆದಾಯ ಮೂಲದಿಂದ ದೇವಾಲಯಕ್ಕೆ 33.30, 68,162 ರೂ. ಸಂಗ್ರಹವಾಗಿದೆ. ಇದರಲ್ಲಿ ಗೋಲಕದಲ್ಲಿ 11,57, 54,977 ರೂ., 30 ರೂ. ಟಿಕೆಟ್ ಮೂಲಕ 2,85,91,900 ರೂ, 100 ರೂ. ಪ್ರವೇಶ ಟಿಕೆಟ್‍ನಿಂದ 7,67,43,547 ರೂ, ಮನಿ ಯಾರ್ಡರ್‍ನಿಂದ 11,02,963 ರೂ., ಡಿಡಿ, ಧನಾದೇಶಗಳಿಂದ 3,65, 594 ರೂ., ದೇವಾಲಯದ ಗುತ್ತಿಗೆಯಿಂದ 74,80,569 ರೂ., ಲಾಡು ಪ್ರಸಾದ ಮಾರಾಟದಿಂದ 3,83,12,002 ರೂ., ಸೇವಾರ್ಥ, ದೇವತೆಗಳ ಮೆರವಣಿಗೆ ಸೇವೆಯಿಂದ 6,65,775 ರೂ., ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ, ಬೆಟ್ಟದ ಮಹಾಬಲೇಶ್ವರ, ನಾರಾ ಯಣಸ್ವಾಮಿ ದೇವಾಲಯದ ವಿವಿಧ ಸೇವಾರ್ಥಗಳಿಂದ 1,48,86,757 ರೂ., ಅತಿಥಿ ಗೃಹದ ಬಾಡಿಗೆ 2,22,500 ರೂ., ದಾಸೋಹ ಭವ ನದ ಕಾಣಿಕೆ 1,55,49,862 ರೂ., ದಿವಾನ್ ಪೂರ್ಣಯ್ಯ ಸಭಾಂ ಗಣದ ಬಾಡಿಗೆ 15,24,175 ರೂ., ಅರಮನೆ ದೇವಾಲಯಗಳ ವಿವಿಧ ಗುತ್ತಿಗೆ 23,000 ರೂ., ಮಳಿಗೆಗಳ ಬಾಡಿಗೆ 7,77,842 ರೂ., ಸಂಕಷ್ಟ ಹರ ಗಣಪತಿ ಸೇವೆ 41,720 ರೂ., ಚಿತ್ರೀಕರಣ 1,05,000 ರೂ., ಕಾಣಿಕೆಯಾಗಿ ಸಲ್ಲಿಕೆಯಾದ ಸೀರೆಗಳ ಹರಾಜಿನಿಂದ1,80,29,850 ರೂ., ಪುಸ್ತಕ, ಈಡುಗಾಯಿ ಮಾರಾಟ 1,77,409 ರೂ., ಮಾಹಿತಿ ಹಕ್ಕು ಶುಲ್ಕ 5,190 ರೂ., ಬಡ್ಡಿ, ತಸ್ತೀಕ್, ವರ್ಷಾಶನದಿಂದ 7,87,447 ರೂ., ವಿವಿಧ ಬ್ಯಾಂಕ್‍ಗಳ ಉಳಿತಾಯದ ಬಡ್ಡಿ, ನೇರ ಜಮೆಯಿಂದ 27,86,224 ರೂ., ಬೆಂಗಳೂರು ಒನ್ ಆನ್‍ಲೈನ್ ಸೇವೆಯಿಂದ 42,89,626 ರೂ., ಇ-ಸೇವೆ, ಸ್ವೈಪಿಂಗ್‍ನಿಂದ 30,00,812 ರೂ., ಶಾಲಾ ಕಟ್ಟಡ ಬಾಡಿಗೆ 18,000 ರೂ., ಅರಮನೆ ದೇವಾಲಯಗಳ ಸೇವಾರ್ಥ 18,25,421 ರೂ. ಸಂಗ್ರಹವಾಗಿದೆ.

Translate »