ಜಿಲ್ಲೆಯಲ್ಲಿ 10 ಮಹಿಳೆಯರ ಮತಗಟ್ಟೆ ಸ್ಥಾಪನೆ
ಕೊಡಗು

ಜಿಲ್ಲೆಯಲ್ಲಿ 10 ಮಹಿಳೆಯರ ಮತಗಟ್ಟೆ ಸ್ಥಾಪನೆ

May 1, 2018

ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದ್ದು, ಮಹಿಳಾ ಮತ ದಾರರನ್ನು ಪ್ರೋತ್ಸಾಹಿಸುವ ಉದ್ದೇಶ ದಿಂದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಗಳಲ್ಲೂ ಹತ್ತು ಮತಗಟ್ಟೆಗಳನ್ನು ಮಹಿಳೆ ಯರಿಗಾಗಿ ತೆರೆಯಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾಧಿಕಾರಿ ಶ್ರೀವಿದ್ಯಾ, ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪಿಂಕ್ ಪೊಲಿಂಗ್ ಸ್ಟೇಷನ್ ಹೆಸರಿನಲ್ಲಿ ಮತ ಗಟ್ಟೆ ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆ ಯಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳಾ ಸಿಬ್ಬಂದಿಗಳನ್ನೇ ನೇಮಿಸಲಾಗುತ್ತದೆ ಎಂದು ತಿಳಿಸಿದರು. ದೈಹಿಕ ನ್ಯೂನತೆ ಇರುವ ವರನ್ನು ಕೂಡಾ ಮತ ಚಲಾಯಿಸುವಂತೆ ಪ್ರೇರೇಪಿಸಲು ವಿಶೇಷ ವ್ಯವಸ್ಥೆ ಇರುವ ಮತ ಗಟ್ಟೆಯನ್ನು ಸ್ಥಾಪಿಸಲಾಗುತ್ತಿದ್ದು, ಈ ಮತ ಗಟ್ಟೆಗಳಲ್ಲಿ ದೈಹಿಕ ನ್ಯೂನತೆ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಶ್ರೀವಿದ್ಯಾ ಮಾಹಿತಿ ನೀಡಿದರು. ಮೊದಲ ಬಾರಿಗೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಪ್ರತಿಯೊಬ್ಬರು ಕೂಡಾ ಮತದಾನ ಮಾಡುವಂತೆ ಪ್ರೇರೇಪಿಸಲು ಈ ಯೋಜನೆ ಗಳನ್ನು ರಾಜ್ಯ ಚುನಾವಣಾ ಆಯೋಗ ಜಾರಿಗೆ ತಂದಿದೆ ಎಂದು ಚುನಾವ ಣಾಧಿಕಾರಿ ಶ್ರೀವಿದ್ಯಾ ಹೇಳಿದರು.

ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ದಲ್ಲಿ 449 ಮತ್ತು ವೀರಾಜಪೇಟೆ ಕ್ಷೇತ್ರ ದಲ್ಲಿ 548 ಸರ್ವೀಸ್ ಮತಗಳಿದ್ದು, ಭಾರತ ಚುನಾವಣಾ ಆಯೋಗ ಅಭಿವೃದ್ಧಿ ಪಡಿಸಿರುವ ತಂತ್ರಾಂಶದ ಮೂಲಕ ಈಗಾಗಲೇ ಸಂಬಂಧಿಸಿದವರಿಗೆ ರವಾನೆ ಮಾಡಲಾಗಿದೆ ಎಂದು ಅವರು ತಿಳಿಸಿ ದರು. ಮಡಿಕೇರಿಯಲ್ಲಿ 2,16,937 ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ 2,16,909 ಮತದಾರರಿದ್ದು, ಈ ಬಾರಿ 8 ಸಾವಿರ ಮತ ದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದು ಶ್ರೀವಿದ್ಯಾ ಮಾಹಿತಿ ನೀಡಿದರು.
ನಗದು, ಮದ್ಯ, ಸಿಗರೇಟ್ ವಶ: ಜಿಲ್ಲೆ ಯಲ್ಲಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಒಟ್ಟು 10,56,548 ನಗದು ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ 28,24,795 ಮೌಲ್ಯದ 8,290ಲೀಟರ್ ಮದ್ಯ ಮತ್ತು 2,25,000 ಮೌಲ್ಯದ 14,800 ಪ್ಯಾಕೇಟ್‍ಗಳಷ್ಟು ವಿದೇಶಿ ಸಿಗರೇಟ್‍ಗಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ತಿಳಿಸಿದರು.

ಸಖಿ ಮತಗಟ್ಟೆ: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕಡಗದಾಳುವಿನ ಸರ್ಕಾರಿ ಪ್ರೌಢಶಾಲೆ, ಮಡಿಕೇರಿಯ ಸಹಕಾರಿ ತರಬೇತಿ ಸಂಸ್ಥೆ ಕಟ್ಟಡ, ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆ, ಸಂತಮೈಕೆಲರ ಹೈಸ್ಕೂಲ್ ಹಾಗೂ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಂಕದ ಕಟ್ಟೆ ಸಮುದಾಯ ಭವನ, ತೆಲುಗರ ಬೀದಿಯ ಸಮುದಾಯ ಭವನ, ಸೆಂಟ್ ಆ್ಯನ್ಸ್ ಹೈಸ್ಕೂಲ್, ಪಂಜರಪೇಟೆ ಯಲ್ಲಿರುವ ಸರ್ಕಾರಿ ಉರ್ದು ಶಾಲೆ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸಖಿ ಹೆಸರಿನಲ್ಲಿ ಮತಗಟ್ಟೆ ಗಳನ್ನು ತೆರೆಯಲಾಗುತ್ತಿದೆ.

ವಿಕಲಚೇತನ ಮತಗಟ್ಟೆ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ತಾಲೂಕು ಪಂಚಾಯ್ತಿ ಕಚೇರಿ ಹಾಗೂ ವೀರಾಜ ಪೇಟೆ ಕ್ಷೇತ್ರದಲ್ಲಿ ಜಯಪ್ರಕಾಶ್ ಬಾಲಕಿ ಯರ ಪ್ರೌಢಶಾಲೆಯಲ್ಲಿ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಂಪ್ರದಾಯಿಕ ಮತಗಟ್ಟೆ: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮೂರು ಮತಗಟ್ಟೆಗಳನ್ನು ಸಾಂಪ್ರಾಯಿಕ ಮತಗಟ್ಟೆ ಎಂದು ತೆರೆಯಲಾಗುತ್ತಿದೆ. ಗುಡ್ಡೆ ಹೊಸೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವೀರಾಜಪೇಟೆ ಕ್ಷೇತ್ರದಲ್ಲಿ ಬೊಮ್ಮಾ ಡುವಿನ ಸರ್ಕಾರಿ ಆಶ್ರಮ ಶಾಲೆ, ನಾಗರ ಹೊಳೆ ಅರಣ್ಯದ ಸರ್ಕಾರಿ ಆಶ್ರಮ ಶಾಲೆ ಯಲ್ಲಿ ಸಾಂಪ್ರದಾಯಿಕ ಮತಗಟ್ಟೆ ಗಳನ್ನು ತೆರೆಯಲಾಗುತ್ತಿದೆ. ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರ ಗಳಲ್ಲಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾನಕ್ಕೆ ಒಟ್ಟು 538 ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಬೆಳಗ್ಗೆ 7ಗಂಟೆ ಯಿಂದ ಸಂಜೆ 6ಗಂಟೆಯವರೆಗೆ ಮತ ದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮತದಾನಕ್ಕೆ 12 ದಾಖಲೆಗಳು
ಚುನಾವಣಾ ಗುರುತಿನ ಚೀಟಿ ಹೊರತುಪಡಿಸಿದಂತೆ ಒಟ್ಟು 12 ಬಗೆಯ ದಾಖಲೆಗಳ ಪೈಕಿ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತ ಚಲಾ ಯಿಸಲು ಅವಕಾಶ ನೀಡಲಾಗಿದೆ. ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ, ಅರೆಸರ್ಕಾರಿ ಅಥವಾ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ ನೀಡಿರುವ ಫೋಟೋ ಇರುವ ಪಾಸ್‍ಬುಕ್, ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯ ವಿತರಿಸಿರುವ ಆರೋಗ್ಯ ವಿಮೆ ಕಾರ್ಡ್, ಆರ್‍ಜಿಐ ನೀಡಿರುವ ಕಾರ್ಡ್, ಭಾವಚಿತ್ರವಿರುವ ಪಿಂಚಣ ದಾಖಲೆಗಳು, ಚುನಾವಣಾ ಆಯೋಗದ ಓಟರ್‍ಚೀಟಿ, ಆಧಾರ್ ಕಾರ್ಡ್‍ಗಳನ್ನು ಬಳಸಿಕೊಂಡು ಮತದಾನ ಮಾಡಬಹು ದೆಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.

Translate »