ಆಷಾಢದ ಕೊನೆ ಶುಕ್ರವಾರ ಲಕ್ಷಾಂತರ ಭಕ್ತರಿಂದ ದೇವಿಯ ದರ್ಶನ
ಮೈಸೂರು

ಆಷಾಢದ ಕೊನೆ ಶುಕ್ರವಾರ ಲಕ್ಷಾಂತರ ಭಕ್ತರಿಂದ ದೇವಿಯ ದರ್ಶನ

July 27, 2019

ಮೈಸೂರು,ಜು.26(ಎಂಟಿವೈ)-ತುಂತುರು ಮಳೆ, ಚಳಿ, ಗಾಳಿ ನಡುವೆ ಆಷಾಢ ಮಾಸದ ಕೊನೆ ಶುಕ್ರ ವಾರ ಚಾಮುಂಡಿಬೆಟ್ಟದ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ನೆರೆದು, ನಾಡದೇವಿಯ ದರ್ಶನ ಪಡೆದು ಜಯಘೋಷ ಮೊಳಗಿಸಿ ಪುಳಕಗೊಂಡರು.

ಶಕ್ತಿ ದೇವತೆಗಳ ಆರಾಧನೆಯ ಮಾಸವಾದ ಆಷಾ ಢದ ಕೊನೆ ಶುಕ್ರವಾರವಾಗಿದ್ದ ಹಿನ್ನೆಲೆಯಲ್ಲಿ ನಾಡಿ ನಾದ್ಯಂತದಿಂದ ಭಕ್ತರ ದಂಡು ತಂಡೋಪತಂಡವಾಗಿ ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದ್ದರಿಂದ ರಾತ್ರಿವರೆಗೂ ಜನ ಜಂಗುಳಿ ಕಂಡು ಬಂತು. ಕಳೆದ 3 ವಾರಗಳಿಗೆ ಹೋಲಿಸಿದರೆ ಇಂದು ದುಪ್ಪಟ್ಟು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರಿಂದ ನಿಯಂತ್ರಿಸಲು ಪೊಲೀಸರು ಶ್ರಮ ಪಡಬೇಕಾಯಿತು.

ಮುಂಜಾನೆ 3 ಗಂಟೆಯಿಂದಲೇ ಪ್ರಧಾನ ಆಗಮಿಕ ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿಪ್ರಸಾದ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿ ದವು. ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾ ಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯ ಗಳು ಜರುಗಿದವು. ಮುಂಜಾನೆ 5.30ಕ್ಕೆ ಮಂಗಳಾರತಿ ಬೆಳಗಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆ 9.30ಕ್ಕೆ ಪ್ರಾಕಾರೋತ್ಸವ ನಡೆಸಲಾಯಿತು. ಸಂಜೆ 6ರಿಂದ 7.30ರವರೆಗೆ ಅಭಿಷೇಕ ನೆರವೇರಿಸಿ, ರಾತ್ರಿ 10ಗಂಟೆಯವರೆಗೂ ಭಕ್ತರಿಗೆ ದೇವಿ ದರ್ಶನ ಪಡೆ ಯಲು ಅವಕಾಶ ಕಲ್ಪಿಸಲಾಗಿತ್ತು.

ಮಹಿಷಾಸುರ ಮರ್ಧಿನಿ ಅಲಂಕಾರ: ಇಂದು ನಾಡಿನ ಅಧಿದೇವತೆಗೆ ವಿಶೇಷ ಸಿಂಹ ವಾಹನದ ಮೇಲೆ ಕುಳಿ ತಂತಿರುವ ಮಹಿಷಾಸುರ ಮರ್ಧಿನಿ ಅಲಂಕಾರ ಮಾಡಲಾಗಿತ್ತು. ನೇರಳೆ ಬಣ್ಣದ ರೇಷ್ಮೆ ಸೀರೆ ಉಡಿಸಿ, ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಇದು ಭಕ್ತರ ಮನಸೂರೆಗೊಂಡಿತು. ಮುಂಜಾನೆ 2 ಗಂಟೆ ಯಿಂದಲೇ ಮೆಟ್ಟಿಲು ಮಾರ್ಗದಲ್ಲಿ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದರೆ, ಖಾಸಗಿ ವಾಹಗಳಲ್ಲಿ ಬಂದಿದ್ದ ಭಕ್ತರು ಮುಂಜಾನೆ 4 ಗಂಟೆಯಿಂದ ಹೆಲಿಪ್ಯಾಡ್‍ನಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಉಚಿತ ಬಸ್ ಮೂಲಕ ಬೆಟ್ಟ ತಲುಪಿದರು. ಇಂದು ಮುಂಜಾನೆಯಿಂದಲೇ ದಟ್ಟವಾಗಿ ಮೋಡ ಕವಿದ ವಾತಾವರಣವಿತ್ತು. ತುಂತುರು ಮಳೆ ಸುರಿಯುತ್ತಿದ್ದರೂ ಭಕ್ತರು ಸರದಿ ಸಾಲಿ ನಲ್ಲಿಯೇ ದೇಗುಲ ಪ್ರವೇಶಿಸಿದರು. ಬೆಳಿಗ್ಗೆ 5.30ಕ್ಕೆ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಾಯಿತು.

ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸು ವವರ ಸಂಖ್ಯೆ ಇಂದು ಹೆಚ್ಚಾಗಿತ್ತು. ಮುಂಜಾನೆಯಿಂದ ಸಂಜೆವರೆಗೂ ಎಡಬಿಡದೆ ನೂರಾರು ಮಂದಿ ಏಕಕಾ ಲಕ್ಕೆ ಮೆಟ್ಟಿಲು ಮಾರ್ಗದಲ್ಲಿ ಬಂದಿದ್ದರಿಂದ ಜಂಗುಳಿ ಹೆಚ್ಚಾಗಿತ್ತು. ಹರಕೆ ಹೊತ್ತಿದ್ದ ಮಹಿಳೆಯರು ಬೆಟ್ಟದ ಪಾದದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲ ಮೆಟ್ಟಿಲಿ ನಿಂದ ಕೊನೆಯ ಮೆಟ್ಟಿಲುಗಳವರೆಗೆ ಅರಿಶಿನ-ಕುಂಕುಮ ಹಚ್ಚಿ, ದೀಪ ಮತ್ತು ಗಂಧದ ಕಡ್ಡಿ ಬೆಳಗಿ ಪ್ರಾರ್ಥಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಮೆಟ್ಟಿಲು ಮೂಲಕ ಬೆಟ್ಟ ಹತ್ತಿ ಸಂಭ್ರಮಿಸಿದರು. ಬೆಟ್ಟ ಇಳಿಯುವವರ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಕೆಲವೆಡೆ ನೂಕು-ನುಗ್ಗಲು ಉಂಟಾಗುವ ಸ್ಥಿತಿ ಇತ್ತು. ಅಹಿತಕರ ಘಟನೆ ನಡೆಯದಂತೆ ಮೆಟ್ಟಿಲು ಮಾರ್ಗದ ಉದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹೆಚ್ಚುವರಿ ಬಸ್ ವ್ಯವಸ್ಥೆ: ಹೆಲಿಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ಜಿಲ್ಲಾಡಳಿತ 22ಕ್ಕೂ ಹೆಚ್ಚು ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ನಗರ ಬಸ್ ನಿಲ್ದಾಣದಿಂದ 10 ವೋಲ್ವೋ ಬಸ್, 35 ಸಾಮಾನ್ಯ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿ ಐದು ನಿಮಿಷಕ್ಕೊಂದು ಬಸ್ ಚಾಮುಂಡಿಬೆಟ್ಟಕ್ಕೆ ಹೊರಡುವ ವ್ಯವಸ್ಥೆ ಮಾಡಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಡಿಸಿಪಿಗಳಾದ ಮುತ್ತು ರಾಜ್ ಮತ್ತು ಕವಿತ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುಂಪು ಚದುರಿ ಸಲು ಅಶ್ವಾರೋಹಿದಳ ನಿಯೋಜಿಸಲಾಗಿತ್ತು. ಸರಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಮಫ್ತಿಯಲ್ಲಿ ಪೊಲೀಸರ ಗಸ್ತು ನಡೆದಿತ್ತು. ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು.

ದಾಸೋಹ ಭವನದಲ್ಲಿ ಪ್ರಸಾದ: ದಾಸೋಹ ಭವನದಲ್ಲಿ 40 ಸಾವಿರ ಭಕ್ತರಿಗೆ ಪ್ರಸಾದ ವಿನಿ ಯೋಗ ಮಾಡಲಾಯಿತು. ಬೆಳಿಗ್ಗೆ 5.30ಕ್ಕೆ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿ 7.30 ರವರೆಗೂ ನಡೆಯಿತು. ಮೊಸರನ್ನ, ಬಾತ್, ಬಿಸಿಬೇಳೆ ಬಾತ್, ಕೇಸರಿ ಬಾತ್ ನೀಡಲಾಯಿತು. ಇದಕ್ಕಾಗಿ ದಾಸೋಹ ಭವನದ ನೆಲ ಮಹಡಿಯಲ್ಲಿ 10 ಹಾಗೂ ಮೊದಲ ಮಹಡಿಯಲ್ಲಿ 10 ಕೌಂಟರ್ ತೆರೆಯಲಾಗಿತ್ತು. ಹರಕೆ ಹೊತ್ತಿದ್ದ ಭಕ್ತರು ಮಹಿಷಾಸುರ ಪ್ರತಿಮೆ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಭಕ್ತರಿಗೆ ಬಿಸಿಬೇಳೆ ಬಾತ್, ಸಿಹಿ, ಖಾರಾ ಪೆÇಂಗಲ್, ಕೇಸರಿಬಾತ್ ದಾಸೋಹ ನಡೆಸಿದರು.

ಬಣ್ಣ ಬಣ್ಣದ ಹೂವುಗಳಿಂದ ಕಂಗೊಳಿಸಿದ ದೇವಾ ಲಯ: ದೇವಾಲಯಕ್ಕೆ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. 4 ಬಣ್ಣದ ಸೇವಂತಿ ಹೂವು, 2 ಬಣ್ಣದ ಚೆಂಡು ಹೂವಿನಿಂದ ದೇವಾಲಯದ ಪ್ರಾಂಗಣ, ಗರ್ಭಗುಡಿಯ ಮುಂಭಾಗದ ಆವರಣ ಸೇರಿ ದಂತೆ ದೇವಾಲಯವನ್ನು ಅಲಂಕರಿಸಲಾಗಿತ್ತು.

ಗಣ್ಯರಿಂದ ದರ್ಶನ: ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ಎಸ್.ಎ.ರಾಮದಾಸ್, ಡಿ.ಸಿ.ತಮ್ಮಣ್ಣ, ಹರ ತಾಳು ಹಾಲಪ್ಪ, ಶಾಸಕರಾದ ಎಲ್.ನಾಗೇಂದ್ರ, ಅನಿತಾ ಕುಮಾರಸ್ವಾಮಿ, ಹಾಸ್ಯನಟ ಚಿಕ್ಕಣ್ಣ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವಮಾನೆ ಸೇರಿ ದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು.

Translate »