ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ
ಮಂಡ್ಯ

ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ

June 3, 2018
  •  ಕೊಚ್ಚಿ ಹೋದ ರಸ್ತೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತ: ಗ್ರಾಮಸ್ಥರ ಪರದಾಟ
  • ಇತ್ತೀಚೆಗಷ್ಟೇ ನಡೆದಿದ್ದ ಕೆರೆ ಏರಿ ಕಾಮಗಾರಿ
  • ಕಳಪೆ ಕಾಮಗಾರಿ ಆರೋಪ
  • ಅಪಾರ ಬೆಳೆ, ಮನೆ ಹಾನಿ

ಮಂಡ್ಯ: ಇಂದು ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ನಾಯಕನ ಹಳ್ಳಿ ಕೆರೆ ಏರಿ ಒಡೆದು ಹೋಗಿ ಗ್ರಾಮದ ಸಂಪರ್ಕ ಕಡಿತಗೊಂಡು, ಅಪಾರ ಬೆಳೆ ನಷ್ಠ ಸಂಭವಿಸಿರುವ ಬಗ್ಗೆ ವರದಿಯಾಗಿದೆ.ಸಂತೆಬಾಚಹಳ್ಳಿ ಹೋಬಳಿ ವ್ಯಾಪ್ತಿಯ ನಾಯಕನಹಳ್ಳಿ ಗ್ರಾಮದ ಕೆರೆಯ ಏರಿ ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆ ಯಿಂದಾಗಿ ಕೋಡಿ ಬಿದ್ದಿರುವುದು ಮಾತ್ರ ವಲ್ಲದೇ, ಕೆರೆಯ ಮಧ್ಯ ಭಾಗ ಒಡೆದು ಹೋಗಿ ಭಾರೀ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದೆ.

ನಾಯಕನಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಂತಿರುವ ಈ ಕೆರೆ ಏರಿ ಇಂದಿನ ಭಾರೀ ಮಳೆಗೆ ಒಡೆದಿದ್ದರೂ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಕೆರೆ ಅಚ್ಚುಕಟ್ಟು ಭಾಗದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಗದ್ದೆಗೆ ನೀರು ತುಂಬಿಕೊಂಡು ಅಪಾರ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಮೂಲ ಗಳಿಂದ ತಿಳಿದು ಬಂದಿದೆ.

ಕಳಪೆ ಕಾಮಗಾರಿ ಆರೋಪ: ಸ್ವಲ್ಪ ದಿನದ ಹಿಂದೆಯಷ್ಟೇ ನಾಯಕನಹಳ್ಳಿ ಕೆರೆಯ ಏರಿಯ ದುರಸ್ತಿ ಕಾಮಗಾರಿ ನಡೆದಿತ್ತು. ಆದರೆ ಇಂದು ಸುರಿದ ಮಳೆಗೆ ಏಕಾಏಕಿ ಒಡೆದಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿ ದ್ದಲ್ಲದೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪರ್ಕ ಕಡಿತ: ಕೆರೆಯ ಏರಿ ಗ್ರಾಮ ದಿಂದ ಸಂತೆಬಾಚಹಳ್ಳಿಗೆ ತೆರಳಲು ಇದ್ದ ಏಕೈಕ ಸಂಪರ್ಕ ರಸ್ತೆಯಾಗಿತ್ತು. ಈ ಮೂಲಕ ಗ್ರಾಮದ ಜನರು ಹಾಗೂ ಶಾಲಾ ಮಕ್ಕಳು ತೆರಳುತ್ತಿದ್ದರು. ಆದರೆ ಇದೀಗ ಭಾರೀ ಮಳೆಯಿಂದ ಕೆರೆ ಏರಿ ಒಡೆದು ರಸ್ತೆ ಕೊಚ್ಚಿ ಹೋಗಿರುವುದ ರಿಂದ ಗ್ರಾಮಕ್ಕೆ ಹೋಗಲು ಜನತೆ ಪರದಾ ಡುವ ಸ್ಥಿತಿ ಎದುರಾಗಿದೆ ಎನ್ನಲಾಗಿದೆ.

ಮನೆಗೆ ಹಾನಿ: ಗ್ರಾಮದ ನಿವಾಸಿ ಎನ್. ಮಂಜೇಗೌಡರಿಗೆ ಸೇರಿದ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಛಾವಣ ಗೋಡೆ ಸಮೇತ ಕುಸಿದು ಬಿದ್ದು ಮನೆ ಸಂಪೂರ್ಣ ನಾಶವಾಗಿದೆ. ಈ ವೇಳೆ ಮನೆ ಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದರಿಂದಾಗಿ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ಬಟ್ಟೆ ಗಳು, ಪಾತ್ರೆ ಸೇರಿದಂತೆ ಮತ್ತಿತರ ವಸ್ತುಗಳು ಗೋಡೆ ಅಡಿಗೆ ಸಿಲುಕಿ ಹಾಳಾಗಿವೆ ಎನ್ನ ಲಾಗಿದೆ. ಇದರಿಂದ ಮನೆಯ ಮಾಲೀಕರಾದ ಎನ್.ಮಂಜೇಗೌಡರಿಗೆ 2ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಇದಲ್ಲದೆ ಕೆ.ಆರ್.ಪೇಟೆ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದ್ದು, ಪಟ್ಟಣದ ಪಶುವೈದ್ಯ ಇಲಾಖೆ ಕಚೇರಿ ಎದುರಿನ ಮರವೊಂದು ಬುಡಸಮೇತ ಮುಖ್ಯರಸ್ತೆಗೆ ಉರುಳಿ ಬಿದ್ದಿದೆ.

Translate »