ಗಾಳಿಬೀಡು ಬಳಿ ಭೂಮಿ ಬಿರುಕು ಅಧಿಕಾರಿಗಳಿಂದ ಪರಿಶೀಲನೆ
ಕೊಡಗು

ಗಾಳಿಬೀಡು ಬಳಿ ಭೂಮಿ ಬಿರುಕು ಅಧಿಕಾರಿಗಳಿಂದ ಪರಿಶೀಲನೆ

July 22, 2018

ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಬಳಿ ಭೂಮಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ತಪ್ಪಲು 2 ಇಂಚುಗಳಷ್ಟು ಆಳಕ್ಕೆ ಇಳಿದಿದೆ. ಬೆಟ್ಟದಲ್ಲಿ 1 ಕಿ.ಮೀ ಉದ್ದಕ್ಕೂ ಅಂದಾಜು 3 ಇಂಚು ಅಗಲ ದಷ್ಟು ಬಿರುಕು ಮೂಡಿದೆ. 1 ಕಿ.ಮೀ ಉದ್ದದ ಬಿರುಕು 50 ಎಕರೆ ಬೆಟ್ಟ ಪ್ರದೇಶ ವನ್ನು ಆವರಿಸಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದೆ.

ಬಿರುಕು ಕಾಣಿಸಿಕೊಂಡ ಪ್ರದೇಶದಲ್ಲಿ 4 ಕುಟುಂಬಗಳು ವಾಸವಿದ್ದು, ಜೀವಭಯ ಎದುರಿಸುತ್ತಿದ್ದಾರೆ. ಈ ವಿಚಾರ ಶುಕ್ರವಾರ ಬೆಳಕಿಗೆ ಬಂದಿದ್ದು, ಮಡಿಕೇರಿ ತಹಶೀ ಲ್ದಾರ್ ಮತ್ತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಶನಿವಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಮೊಣ್ಣಂಗೇರಿಗೆ ತೆರಳಿ ಬಿರುಕು ಬಿಟ್ಟ ಪ್ರದೇಶವನ್ನು ಪರಿಶೀಲಿಸಿದರು.

2013ರಲ್ಲಿ ಮಡಿಕೇರಿ ಮತ್ತು ಸೋಮ ವಾರಪೇಟೆ ವ್ಯಾಪ್ತಿಯಲ್ಲಿ ಲಘುವಾಗಿ ಭೂಮಿ ಕಂಪಿಸಿದ ಸಂದರ್ಭ, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿತ್ತು. ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟು ಹಾನಿ ಸಂಭ ವಿಸಿತ್ತು. 2013ರಲ್ಲಿ ಕಂಡು ಬಂದಿದ್ದ ಪ್ರದೇಶದಲ್ಲೇ ಇದೀಗ ಬಿರುಕು ಬಿಟ್ಟಿದ್ದು, ಭೂಮಿಯ ಆಳದಲ್ಲಿ ಅಂತರ್ಜಲದ ಹರಿವಿನಿಂದ ಇಂತಹ ಘಟನೆ ಸಂಭವಿ ಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಭೂಮಿಯಲ್ಲಿ ಮೂಡಿರುವ ಬಿರುಕಿ ನಿಂದ ಬೆಟ್ಟ ಪ್ರದೇಶದ ಮೇಲಿನ ಭೂ ಭಾಗ 2 ಭಾಗವಾಗಿ ವಿಭಜಿಸಲ್ಪಟ್ಟಿದ್ದು, ಇಡೀ ಬೆಟ್ಟದ ಕುಸಿಯುವ ಆತಂಕ ಎದುರಾಗಿದೆ. ಬೆಟ್ಟದ ಪ್ರದೇಶದಲ್ಲಿರುವ ಕಾಫಿ ತೋಟಗಳ ಒಳಗೂ ಕೂಡ ಬಿರುಕು ಮೂಡಿದ್ದು, ಸ್ಥಳೀಯ ನಿವಾಸಿ ಗಳು ಕಂಗಾಲಾಗಿದ್ದಾರೆ. ಮನೆಯೊಂದಕ್ಕೆ ತೆರಳುವ ರಸ್ತೆಗೆ ಭಾರೀ ಬರೆ ಕುಸಿದು ಬಿದ್ದಿದ್ದು ಬರೆಯಿಂದ ಅಂತರ್ಜಲ ಉಕ್ಕಿ ಹರಿಯುತ್ತಿದೆ.

ಈವ್ಯಾಪ್ತಿಯಲ್ಲಿ ಈಗಾಗಲೇ 250 ಇಂಚು ಮಳೆ ಸುರಿದಿರುವ ಕುರಿತು ಗ್ರಾಮಸ್ಥರು ಅಂದಾಜಿಸಿದ್ದು, ಕಳೆದ 2 ದಿನಗಳಿಂದ ಮಳೆಯ ಅಬ್ಬರ ಅಲ್ಪ ಮಟ್ಟಿಗೆ ತಗ್ಗಿದೆ. ಗಾಳಿಯ ತೀವ್ರತೆ ಇರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಇದು ಅಂತರ್ಜಲ ಮಟ್ಟವನ್ನು ಏರಿಕೆ ಮಾಡಿದೆ. ಮಕ್ಕಂದೂರುವಿನ ನಿವಾಸಿ ಮಂಜು ನಾಥ್ ಎಂಬವರ ಮನೆಯ ತಳಪಾಯ ಮತ್ತು ಗೋಡೆಯಲ್ಲೂ ಕೂಡ ಇದ್ದಕ್ಕಿ ದ್ದಂತೆ ಬಿರುಕು ಮೂಡಿದ್ದು, ಮನೆಗೆ ಭಾರಿ ಹಾನಿ ಸಂಭವಿಸಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದು, ಮನೆ ಮಂದಿ ಆತಂಕ ಗೊಂಡಿದ್ದಾರೆ. ಮನೆಯ ನಡುವೆಯೆ ಬಿರುಕು ಹಾದು ಹೋಗಿದ್ದು, ಕಾಫಿ ತೋಟದ ಒಳಗೂ ಬಿರುಕು ಕಂಡು ಬಂದಿದೆ.

Translate »