ಮೈಸೂರು: ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ, ನಾಡಿನ ಪರಂಪರೆ, ಸಂಸ್ಕೃತಿ, ಗತ ವೈಭವದ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಸಜ್ಜುಗೊಳ್ಳುತ್ತಿವೆ.
ನಾಡಿನ ಕಲೆ, ವಾಸ್ತು ಶಿಲ್ಪ, ಸಂಸ್ಕೃತಿ, ಪ್ರವಾಸೋದ್ಯಮ, ಜಾನಪದ ಹಿನ್ನೆಲೆ, ಹಬ್ಬಗಳ ಆಚರಣೆ, ಸಾಧಕರ ಯಶೋಗಾಥೆಯಂತಹ ಧಾರ್ಮಿಕ ಹಾಗೂ ಐತಿ ಹಾಸಿಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವು ದರ ಜೊತೆಗೆ, ಅಂತರ್ಜಲ ರಕ್ಷಣೆ, ಮತದಾನ ಜಾಗೃತಿ, ಕಾನೂನು ಅರಿವು, ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸುವ 40ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ ಎಂದು ಸ್ತಬ್ಧಚಿತ್ರ ಉಪಸಮಿತಿ ವಿಶೇಷಾಧಿಕಾರಿ ಕೆ.ವಿ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಸ್ತಬ್ಧ ಚಿತ್ರಗಳಿವು: ಬಾಗಲಕೋಟೆ ಜಿಲ್ಲೆಯ ‘ಪಟ್ಟದ ಕಲ್ಲು’, ಬೆಂಗಳೂರು ಗ್ರಾಮಾಂತರ ಜಿಲ್ಲೆಯ `ಐತಿಹಾಸಿಕ ಘಾಟಿ ಸುಬ್ರಮಣ್ಯ’, ಬೆಂಗಳೂರಿನಲ್ಲಿ `ಘನತ್ಯಾಜ್ಯ ವಿಲೇವಾರಿ’, ಬೆಳಗಾವಿ `ಕಿತ್ತೂರಿನ ವೈಭವ’, ಬಳ್ಳಾರಿಯ `ತುಂಗಭದ್ರ ಜಲಾಶಯ’, ಬೀದರ್ನ `ಅನುಭವ ಮಂಟಪ’, ವಿಜಯಪುರದ `ಗೋಲ್ ಗುಂಬಜ್’, ಚಾಮರಾಜನಗರದ `ಅರಣ್ಯ ಸಂಪತ್ತಿ ನೊಳಗೆ ಆಧ್ಯಾತ್ಮಿಕ ಕೇಂದ್ರಗಳು’, ಚಿತ್ರ ದುರ್ಗದ `ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಾಯಕ ಹಟ್ಟಿದ ಪುಣ್ಯ ಕ್ಷೇತ್ರ’, ಚಿಕ್ಕಬಳ್ಳಾಪುರದ `ವಿಧುರಾಶ್ವಥ ಪುಣ್ಯಕ್ಷೇತ್ರ’, `ಸ್ಮಾರ್ಟ್ ಸಿಟಿಯತ್ತ ದಾವಣಗೆರೆ’, ದಕ್ಷಿಣ ಕನ್ನಡ ಜಿಲ್ಲೆಯ `ಕೋಟೆ ಚನ್ನಯ ತುಳನಾಡ ವೀರರು’, `ದ.ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರ ಧಾರ ವಾಡ’, ಗದಗದ `ಮರಗಳ ಮರು ನೆಡುವಿಕೆ’, `ಕಲ್ಬುರ್ಗಿಯ ವಿಮಾನ ನಿಲ್ದಾಣ’, ಹಾಸನ ಜಿಲ್ಲೆಯ `ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ’, ಹಾವೇರಿಯ `ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಮತ್ತು ಬಂಕಾಪುರ ನವಿಲುಧಾಮ’, ಕೋಲಾರದ `ಗ್ರಾಮದ ಅಭಿವೃದ್ಧಿ ನಡೆ’, ಕೊಪ್ಪಳದ `ಶ್ರೀ ಕನಕಾಚಲ ದೇವಸ್ಥಾನ ಮತ್ತು ಐತಿ ಹಾಸಿಕ ಬಾವಿ’, ಮಂಡ್ಯ ಜಿಲ್ಲೆಯ `ನಾಲ್ವಡಿ ಯವರ ಕೊಡುಗೆ’, `ಮೈಸೂರಿನ ಗೋಲ್ಡನ್ ಟೆಂಪಲ್’, ರಾಯಚೂರಿನ `ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ’, ರಾಮ ನಗರ ಜಿಲ್ಲೆಯ `ಭಕ್ತಿ-ನಂಬಿಕೆ ಹಾಗೂ ಕರಕುಶಲ ಇತಿಹಾಸಗಳ ಸಂಗಮ’, ಶಿವ ಮೊಗ್ಗದ `ಬದನೂರು ಶಿವಪ್ಪನಾಯಕನ ಸಾಧನೆ’, ತುಮಕೂರು ಜಿಲ್ಲೆಯ `ಶತಮಾನ ಕಂಡ ಡಾ.ಶಿವಕುಮಾರ ಸ್ವಾಮೀಜಿ’, ಉಡುಪಿಯ `ಪರಶುರಾಮ ಸೃಷ್ಟಿಸಿದ ತುಳುನಾಡು’, ಉತ್ತರ ಕನ್ನಡ ಜಿಲ್ಲೆಯ `ಸಿದ್ದಿ ಜನಾಂಗ ಹಾಗೂ ಪ್ರವಾಸಿತಾಣ ‘ಯಾಣ’, ಯಾದಗಿರಿಯ `ಬಂಜಾರ ಸಂಸ್ಕೃತಿ’ ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳ ವಿಶೇಷತೆಗಳ ಸ್ತಬ್ದ ಚಿತ್ರಗಳು ಸಜ್ಜುಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಪ್ರವಾ ಸೋದ್ಯಮ ಇಲಾಖೆಗಳು ಮೇಲುಸ್ತುವಾರಿ ಯಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಇದೇ ಮೊದಲು: ಮೈಸೂರು ಜಿಲ್ಲಾ ಪಂಚಾಯ್ತಿ ವತಿಯಿಂದ ಈ ಬಾರಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿರುವ ‘ಗೋಲ್ಡನ್ ಟೆಂಪಲ್’ ಮಾದರಿ ಸ್ತಬ್ಧ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಕಾನೂನು ಅರಿವು ಮೂಡಿಸುವ, ಎನ್ಸಿಸಿ ಬೆಟಾಲಿಯನ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸುವ ಹಾಗೂ ಸ್ವೀಪ್ ವತಿಯಿಂದ ಮತದಾತ ಜಾಗೃತಿ ಯನ್ನು ಮೂಡಿಸುವ ಸ್ತಬ್ಧಚಿತ್ರಗಳು ಈ ಬಾರಿಯ ವಿಶೇಷತೆ ಎನ್ನಬಹುದು.
ಇನ್ನು ವಾರ್ತಾ ಇಲಾಖೆಯಿಂದ `ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ’, ಪ್ರವಾಸೋದ್ಯಮ ಇಲಾಖೆ ಯಿಂದ `ಒಂದು ರಾಜ್ಯ ಹಲವು ಜಗತ್ತು’, ಕನ್ನಡ ಸಂಸ್ಕೃತಿ ಇಲಾಖೆಯಿಂದ `ಕರ್ನಾಟಕದ ರತ್ನಗಳು’ ಸೇರಿದಂತೆ ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳೂ ಎಂದಿನಂತೆ ಇರಲಿವೆ.
ಬಹುಮಾನ: ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ತಿರ್ಪುಗಾರರಿಂದ ಆಯ್ಕೆಯಾಗುವ ಮೊದಲ 3 ಸ್ತಬ್ದ ಚಿತ್ರಗಳಿಗೆ ಪ್ರಥಮ ಬಹುಮಾನವಾಗಿ 30 ಸಾವಿರ ರೂ., ದ್ವಿತೀಯ ಬಹುಮಾನವಾಗಿ 20 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.