ಮೈಸೂರು, ಸೆ. 11(ಆರ್‍ಕೆ)- 2019ರ ದಸರಾ ಮಹೋತ್ಸವ ಮತ್ತು ಪ್ರವಾಸೀ ತಾಣಗಳ ಬಗ್ಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿ ಎಂದು ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಸರಾ ಮಹೋತ್ಸವದ ಕಾರ್ಯಕ್ರಮಗಳು, ಪ್ರವಾಸಿ ತಾಣಗಳು, ಕಲ್ಪಿಸಿ ರುವ ಸೌಲಭ್ಯಗಳು, ಮಾರ್ಗದರ್ಶಿ ಗಳು, ಪ್ರವೇಶ ವೇಳಾಪಟ್ಟಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಮೈಸೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯ ಕ್ರಮ ರೂಪಿಸಿ ಎಂದೂ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆ…
ಶಾಶ್ವತ ಮೈಸೂರು ದಸರಾ ಪ್ರಾಧಿಕಾರ ರಚಿಸಿ
September 12, 2019ಮೈಸೂರು, ಸೆ.11(ಆರ್‍ಕೆಬಿ)- ನಾಡ ಹಬ್ಬ ದಸರಾ ಆಚರಣೆಗೆ ಸಂಬಂಧಿಸಿದಂತೆ ಶಾಶ್ವತ ದಸರಾ ಪ್ರಾಧಿಕಾರ ರಚಿಸುವಂತೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮೈಸೂರಿನ ಮಾಜಿ ಮೇಯರ್‍ಗಳು ಸಲಹೆ ನೀಡಿದರು. ದಸರಾ ಮಹೋತ್ಸವ ಆಚರಣೆ ಕುರಿ ತಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ರುವ ವಸತಿ ಸಚಿವ ವಿ.ಸೋಮಣ್ಣ ಅವರು ಜಲದರ್ಶಿನಿ ಅತಿಥಿಗೃಹದಲ್ಲಿ ಕರೆದಿದ್ದ ಮಾಜಿ ಮೇಯರ್‍ಗಳ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು. ದಸರಾ ಪ್ರಾಧಿಕಾರ ರಚನೆ ಮಾಡು ವಂತೆ ಬಹಳ ವರ್ಷಗಳಿಂದ ಬೇಡಿಕೆ ಇದೆ….
ಮೈಸೂರು ಜಿಲ್ಲಾ ದಸರಾ ತಾಲೂಕು ಮಟ್ಟದ ಕ್ರೀಡಾಕೂಟ
September 12, 2019ಮೈಸೂರು, ಸೆ.11-ಯುವ ಸಬಲೀಕರÀಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯಕ್ತಾಶ್ರಯದಲ್ಲಿ 2019-20ನೇ ಸಾಲಿನ ಮೈಸೂರು ಜಿಲ್ಲೆಯ ಹುಣಸೂರು, ಹೆಚ್.ಡಿ.ಕೋಟೆ, ಮೈಸೂರು, ನಂಜನ ಗೂಡು ಮತ್ತು ಟಿ.ನರಸೀಪುರ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಏರ್ಪ ಡಿಸಲಾಗಿದೆ. ಸೆ.14 ರಂದು ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದ್ದು, ಇದರ ಸಂಚಾಲಕರಾಗಿ ಲೋಕೇಶ್ ಬಿ. ಜಿಮ್ನಾಸ್ಟಿಕ್ ತರಬೇತು ದಾರರು-9449175644, ಗೋವಿಂದನಾಯಕ ಜಿ.ಕೆ-8197428751 ಇವರನ್ನು ನೇಮಿಸಲಾಗಿದೆ. ಸೆ.15 ರಂದು ಹೆಚ್.ಡಿ.ಕೋಟೆ ತಾಲೂಕಿನ…
ಮಾನವನ ಸಮೃದ್ಧ ಜೀವನಕ್ಕೆ ಪರಿಸರ ಸಮತೋಲನ ಅವಶ್ಯ: ಐಜಿಪಿ
September 12, 2019ಮೈಸೂರು,ಸೆ.11(ಎಂಟಿವೈ)- ಮಾನವನ ಸಮೃದ್ಧ ಜೀವನಕ್ಕೆ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದ್ದು, ಪ್ರಾಣಿ-ಪಕ್ಷಿಗಳೊಂದಿಗೆ ಸಮಸ್ತ ಜೀವ ಸಂಕುಲದ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸುವಂತೆ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಸಲಹೆ ನೀಡಿದ್ದಾರೆ. ಮೈಸೂರಿನ ಅಶೋಕಪುರಂ ಅರಣ್ಯ ಭವನದ ಆವ ರಣದಲ್ಲಿರುವ ಲೇ.ವೆಂಕಟಸ್ವಾಮಿ ಉದ್ಯಾನವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ 1966ರಿಂದ 2018ರವರೆಗೆ ರಾಜ್ಯದ ವಿವಿಧೆಡೆ ಕರ್ತವ್ಯದ ವೇಳೆ ಹುತಾತ್ಮರಾದ 47 ಅರಣ್ಯ ಸಿಬ್ಬಂದಿ ಆತ್ಮಕ್ಕೆ ಶಾಂತಿಕೋರಿ ಪುಷ್ಪ ನಮನ…
ಸೆ.22ರಂದು ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ
September 12, 2019ಮೈಸೂರಿನ ಎನ್.ಧ್ರುವರಾಜ್ ಸೇರಿ 25 ಮಂದಿಗೆ `ಪರಿವರ್ತನ ಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮೈಸೂರು, ಸೆ.11(ಪಿಎಂ)- ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಸೆ.22ರಂದು ಬೆಂಗಳೂರಿನಲ್ಲಿ ಶ್ರೀ ನಾರಾ ಯಣಗುರು ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಬೆಳಿಗ್ಗೆ 10ಕ್ಕೆ ಜಯಂತ್ಯೋತ್ಸವವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ನಾರಾ ಯಣಗುರುಗಳ ಭಾವಚಿತ್ರಕ್ಕೆ ಸಚಿವ ಕೋಟ…
ನಾಳೆ ಗಾನಸಿರಿ ವೇದಾಂತ ಲಹರಿ ಸಮಾರೋಪ ಸಮಾರಂಭ
September 12, 2019ಮೈಸೂರು, ಸೆ.11-ಪೇಜಾವರ ಮಠದ ಶ್ರೀಪಾದಂಗಳವರ ಚಾತುರ್ಮಾಸ್ಯ ಗಾನಸಿರಿ ವೇದಾಂತ ಲಹರಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆ.13ರಂದು ಶುಕ್ರವಾರ ನಗರದ ಕೃಷ್ಣಧಾಮ, ಸರಸ್ವತಿಪುರಂನಲ್ಲಿ ನಡೆಯಲಿದ್ದು, ಅಂದು ಸಂಜೆ 4 ರಿಂದ 5ರವರೆಗೆ ಯುವ ಪ್ರತಿಭಾವಂತ ಗಾಯಕಿಯರಾದ ಕು.ರಕ್ಷಣಾ ಹಾಗೂ ಕು.ರಕ್ಷಿತಾ ಸಹೋದರಿಯರು ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 5ರಿಂದ 7ರವರೆಗೆ ಗಾನಸಿರಿ ವೇದಾಂತ ಲಹರಿ ‘ಹರಿದಾಸ ವೈಭವ’ ಎಂಬ ಕಾರ್ಯಕ್ರಮ ನಡೆಯಲಿದೆ. ಅಂದು ಗಾಯನ ಕಾರ್ಯಕ್ರಮವನ್ನು ಮೈಸೂರಿನ ಪ್ರಖ್ಯಾತ ಗಾಯಕರಾದ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ…
ಇಂದು ಕೆಲವೆಡೆ ವಿದ್ಯುತ್ ನಿಲುಗಡೆ
September 12, 2019ಮೈಸೂರು,ಸೆ.11-ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಸೆ.12ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ದೇವನೂರು ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ರಾಜೀವ್ ನಗರ 1ನೇ, 2ನೇ ಮತ್ತು 3ನೇ ಹಂತ, ಶಾಂತಿನಗರ, ನೆಹರೂ ನಗರ, ರಾಧಾಕೃಷ್ಣ ನಗರ, ಭಾರತ್‍ನಗರ, ಜೆ.ಎಸ್.ಎಸ್. ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್ ವಕ್ರ್ಸ್, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ಮತ್ತು ಬನ್ನೂರು ರಿಂಗ್‍ರಸ್ತೆ ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. ರಾಜೀವ್‍ನಗರ ವಿ.ವಿ. ಕೇಂದ್ರದ ವ್ಯಾಪ್ತಿಯಲ್ಲಿ ನಾರಾಯಣ ಹೃದ…
ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆ 2ನೇ ತಂಡ
September 10, 2019ಮೈಸೂರು, ಸೆ.9(ಎಸ್‍ಬಿಡಿ)- ದಸರಾ ಮಹೋತ್ಸವದಲ್ಲಿ ಭಾಗಿಯಾಗುವ 2ನೇ ತಂಡದ ಗಜಪಡೆ ಇಂದು ಮೈಸೂರು ಅರಮನೆ ಆವರಣ ಪ್ರವೇಶಿಸಿತು. ವಿವಿಧ ಶಿಬಿರಗಳಿಂದ 2 ತಂಡವಾಗಿ ಕರೆತರಲಾಗಿರುವ 7 ಆನೆಗಳನ್ನು ಅರಮನೆ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಶಾಸಕ ಎಸ್.ಎ.ರಾಮದಾಸ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಡಿಸಿಎಫ್(ವನ್ಯಜೀವಿ) ಅಲೆಕ್ಸಾಂಡರ್ ಇನ್ನಿತರ ಗಣ್ಯರು ಗಜಪಡೆಗೆ ಪೂಜೆ ಸಲ್ಲಿಸಿದರು. ಇದರಲ್ಲಿ ಮತ್ತಿಗೋಡು ಆನೆ ಶಿಬಿರದಿಂದ `ಬಲರಾಮ’ ನಿನ್ನೆಯೇ ಆಗಮಿಸಿದ್ದು, ಉಳಿದಂತೆ ದುಬಾರೆಯಿಂದ `ಕಾವೇರಿ’, `ವಿಕ್ರಮ’,…
ಜೆಡಿಎಸ್‍ನ ಪ್ರಭಾವಿ ಶಾಸಕರ ಬಿಜೆಪಿಗೆ ಸೆಳೆಯಲು ಸಿಎಂ ಯಡಿಯೂರಪ್ಪ ತಂತ್ರ
September 10, 2019ಬೆಂಗಳೂರು, ಸೆ.9(ಕೆಎಂಶಿ)- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವನ್ನು ಮುಗಿಸಲು ಆ ಪಕ್ಷದ ಪ್ರಭಾವಿ ಹಾಗೂ ವರ್ಚಸ್ವಿ ನಾಯಕರನ್ನು ಸೆಳೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಯಡಿಯೂರಪ್ಪ ಅವರು ಎರಡನೇ ಹಂತದ ಆಪರೇಷನ್ ಕಮಲ ಕಾರ್ಯಾಚರಣೆ ಆರಂಭಿಸಿದ್ದರೆ, ಅದೇ ಕಾಲಕ್ಕೆ ತಮ್ಮ ಪುತ್ರನ ಹಿತ ಕಾಯಲು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮೇಲಿನ ಹಿಡಿತ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಕೆಲ ಪ್ರಭಾವಿ ಮತ್ತು ವರ್ಚಸ್ಸುಳ್ಳ ನಾಯಕ ರನ್ನು…
ಮೈಸೂರಲ್ಲಿ ಒಕ್ಕಲಿಗರ ಸಂಘದಿಂದ ಬೃಹತ್ ಪ್ರತಿಭಟನಾ ರ್ಯಾಲಿ
September 10, 2019ಮೈಸೂರು,ಸೆ.9(ಆರ್‍ಕೆ)- ಕಾಂಗ್ರೆಸ್‍ನ ಪ್ರಭಾವಿ ನಾಯಕರೂ ಆದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಇಂದು ಮೈಸೂರಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಆಯೋ ಜಿಸಿದ್ದ ರ್ಯಾಲಿಯು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಆರಂಭವಾಗಿ ದೊಡ್ಡ ಗಡಿಯಾರ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ಶಿವರಾಂಪೇಟೆ ಮೂಲಕ ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಜಂಕ್ಷನ್, ಮೆಟ್ರೋಪೋಲ್ ಸರ್ಕಲ್, ವಿನೋಬಾ ರಸ್ತೆಯಲ್ಲಿ ಸಾಗಿ…










