Tag: Mysuru

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ
ಮೈಸೂರು

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ

January 1, 2019

ಮೈಸೂರು: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿದರ (ಗೈಡ್‍ಲೈನ್ಸ್ ರೇಟ್) ನಾಳೆ(ಜ.1)ಯಿಂದಲೇ ಅನ್ವಯ ವಾಗಲಿದ್ದು, ಮೈಸೂರಿನಲ್ಲಿ ಶೇ.5ರಿಂದ 25ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಆಸ್ತಿ ನೋಂದಣಿ ಶುಲ್ಕವೂ ಹೆಚ್ಚಾಗಿದೆ. ಮೈಸೂರು ನಗರದ 4 ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಜಮೀನು, ಮನೆ, ನಿವೇಶನ, ಫ್ಲ್ಯಾಟ್ ನೋಂದಣಿ ವೆಚ್ಚದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೃಷಿ ಜಮೀನು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿ, ವಾಣಿಜ್ಯ ಹಾಗೂ ವಸತಿಯೇತರ ಉದ್ದೇಶಿತ ಸ್ಥಿರಾಸ್ತಿ, ಮೂಲೆ ನಿವೇಶನ, ಎರಡೂ…

ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ
ಮೈಸೂರು

ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ

January 1, 2019

ಮೈಸೂರು: ಎಲ್ಲೆಲ್ಲೂ ನೂತನ ವರ್ಷದ ಸಂಭ್ರಮಾ ಚರಣೆ. 2018ಕ್ಕೆ ಗುಡ್ ಬೈ ಹೇಳಿ 2019ಕ್ಕೆ ಕಾಲಿಟ್ಟ ಸಂತಸದ ಕ್ಷಣ. ಈ ಎಲ್ಲಾ ಕ್ಷಣಗಳು ಕಂಡು ಬಂದಿದ್ದು ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ರಾತ್ರಿ… ಒಂದೆಡೆ ಅರಮನೆ ತನ್ನ ದೀಪಾಲಂಕಾರದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಪ್ರೇಮಿಗಳು, ಯುವಜನತೆ, ನವ ಜೋಡಿಗಳು ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಹಾಡಿ, ಕುಣಿಯುವುದ ರೊಂದಿಗೆ ಹೊಸ ವರ್ಷವನ್ನು ಹರ್ಷೊ ಲ್ಲಾಸದ ನಡುವೆ ಬರಮಾಡಿಕೊಂಡರು. ಹೊಸ ವರ್ಷದ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಹೋಟೆಲ್‍ಗಳು ವಿದ್ಯುತ್ ದೀಪಗಳಿಂದ…

ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಅವಶ್ಯ
ಮೈಸೂರು

ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಅವಶ್ಯ

January 1, 2019

ಮೈಸೂರು: ಬೆಂಗಳೂರು ಜಲಮಂಡಳಿ ಮಾದರಿಯಲ್ಲಿ ಮೈಸೂರು ನಗರದ ನೀರಿನ ಸಮರ್ಪಕ ನಿರ್ವಹಣೆಗೆ ಪ್ರತ್ಯೇಕ ಜಲಮಂಡಳಿ ಅಗತ್ಯವಿದ್ದು, ಈ ಸಂಬಂಧ ಪರಿಶೀಲಿಸಿ ಮುಂದುವರೆಯುವುದಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಮೈಸೂರಿನ ಜಲದರ್ಶಿನಿ ನೂತನ ಕಟ್ಟಡ ದಲ್ಲಿರುವ ಸಚಿವರ ಕಾರ್ಯಾಲಯದಲ್ಲಿ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಮೈಸೂರು ನಗರಕ್ಕೆ ನೀರು ಸರಬರಾಜು ಸಂಬಂಧ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಪ್ರಸ್ತುತ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಬೆಂಗಳೂರು ಬಿಡ್ಲ್ಯೂಎಸ್‍ಎಸ್ ಮಾದರಿ ಯಲ್ಲಿ…

ಸ್ವಾತಂತ್ರ್ಯದ 7 ದಶಕ ಕಳೆದರೂ ಉನ್ನತ ಶಿಕ್ಷಣದಲ್ಲಿ ಹಿಂದೆ
ಮೈಸೂರು

ಸ್ವಾತಂತ್ರ್ಯದ 7 ದಶಕ ಕಳೆದರೂ ಉನ್ನತ ಶಿಕ್ಷಣದಲ್ಲಿ ಹಿಂದೆ

January 1, 2019

ಮೈಸೂರು,ಡಿ.31(ವೈಡಿಎಸ್)-ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾ ದರೂ ಉನ್ನತ ಶಿಕ್ಷಣದಲ್ಲಿ ಬಹಳ ಹಿಂದು ಳಿದಿದ್ದೇವೆ. ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ವಿದ್ಯಾಸಂಸ್ಥೆಗಳ ಆವರಣ ದಲ್ಲಿ ನೂತನವಾಗಿ ನಿರ್ಮಿಸಿರುವ `ಶತೋತ್ತರ ಸುವರ್ಣಸೌಧ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಉನ್ನತ ಶಿಕ್ಷಣದಲ್ಲಿ ಬಹಳ ಹಿಂದೆ ಇದ್ದೇವೆ. ಸ್ವಾತಂತ್ರ್ಯ ಬಂದು 71 ವರ್ಷಗಳಾದರೂ ಉನ್ನತ ಶಿಕ್ಷಣದಲ್ಲಿ ಅಭಿ ವೃದ್ಧಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಕ್ಕಳು ಡಾಕ್ಟರ್, ಎಂಜಿನಿಯರ್ ಓದ ಬೇಕೆಂಬ ವ್ಯಾಮೋಹ…

ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನದಿಂದ ವಿದ್ಯಾರ್ಥಿ ಪ್ರಗತಿ-ಸಾಧನೆ
ಮೈಸೂರು

ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನದಿಂದ ವಿದ್ಯಾರ್ಥಿ ಪ್ರಗತಿ-ಸಾಧನೆ

January 1, 2019

ಮೈಸೂರು,ಡಿ.31(ಎಸ್‍ಪಿಎನ್)- ವಿದ್ಯಾರ್ಥಿ ದಿಸೆಯಲ್ಲೇ ವೃತ್ತಿ ಕೌಶಲ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಮೌಲ್ಯಗಳನ್ನು ಅಳ ವಡಿಸಿಕೊಂಡರೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದಲ್ಲಿ ಪ್ರಗತಿಯ ನಾಗಾಲೋಟದಲ್ಲಿ ತಮ್ಮ ಕೊಡುಗೆ ದಾಖಲಿಸಬಹುದು ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನ ಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾ ನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರು-ಬೆಂಗಳೂರು ರಸ್ತೆಯ ಕಲಾಮಂದಿರದಲ್ಲಿ ಆದಿಚುಂಚನಗಿರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಅವರು ಸೋಮವಾರ ಮಾತ ನಾಡಿದರು. ಕಾರ್ಯಕ್ರಮದ ಮಧ್ಯೆ ಶಿಳ್ಳೆ ಹೊಡೆಯುವ ವಿದ್ಯಾರ್ಥಿಗಳು ಕೆಟ್ಟವ ರೆಂಬ ಅಭಿಪ್ರಾಯಕ್ಕೆ ನಾನು ಬರುವುದಿಲ್ಲ….

ರೈತರ ಬಗ್ಗೆ ಕಳಕಳಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿಪಡಿಸಿ
ಮೈಸೂರು

ರೈತರ ಬಗ್ಗೆ ಕಳಕಳಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿಪಡಿಸಿ

January 1, 2019

ಮೈಸೂರು, ಡಿ.31(ಪಿಎಂ)- ದೇಶದ ರೈತ ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಜಕ್ಕೂ ಕಾಳಜಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿ ಮಾಡಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳಿಂದ ರೈತಪರ ನೀತಿಗಳನ್ನು ಜಾರಿಗೊಳಿಸಲಾ ಗದ ಮೋದಿಯವರಿಗೆ ಇದೀಗ ತಮ್ಮ ಸರ್ಕಾ ರದ ಕೊನೆ ದಿನಗಳಲ್ಲಿ ರೈತರು ನೆನಪಾಗು…

ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉನ್ನತ ಹುದ್ದೆ ಹೊಂದಲು ಸಾಧ್ಯ
ಮೈಸೂರು

ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉನ್ನತ ಹುದ್ದೆ ಹೊಂದಲು ಸಾಧ್ಯ

January 1, 2019

ಮೈಸೂರು,ಡಿ.31(ಎಂಕೆ)-ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಹೇಳಿದರು. ಮೈಸೂರಿನ ಬೋಗಾದಿ ರಸ್ತೆಯ ಗಣ ಗರಹುಂಡಿಯಲ್ಲಿರುವ ನಂಜುಂಡೇಶ್ವರ ವಿದ್ಯಾಕೇಂದ್ರದ 9ನೇ ವರ್ಷದ ವಾರ್ಷಿ ಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಓದಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಪಠ್ಯೇತರ ಚಟುವಟಿಕೆಗಳಿಗೂ ಗಮನ ನೀಡಬೇಕು ಎಂದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಅವರು ತಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂಬುದು ಬಹಳ…

ಮೈಸೂರು ಪೊಲೀಸರಿಂದ ‘ಆಪರೇಷನ್ ಈಗಲ್’
ಮೈಸೂರು

ಮೈಸೂರು ಪೊಲೀಸರಿಂದ ‘ಆಪರೇಷನ್ ಈಗಲ್’

January 1, 2019

ಮೈಸೂರು: ಮೈಸೂರು ನಗರ ಪೊಲೀಸರು ರೌಡಿಶೀಟರ್‍ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ‘ಆಪರೇಷನ್ ಈಗಲ್’ (ಹದ್ದು) ಹೆಸರಿ ನಲ್ಲಿ ಸಮಾಜಘಾತುಕ ಶಕ್ತಿಗಳ ಮೇಲೆ ಅಕ್ಷರಶಃ ಹದ್ದಿನ ಕಣ್ಣಿಟ್ಟಿದ್ದಾರೆ. ‘ಆಪರೇಷನ್ ಈಗಲ್’ನ ಭಾಗವಾಗಿ ಡಿ. 29 ಮತ್ತು 30 ರಂದು 90 ರೌಡಿ ಶೀಟರ್‍ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ನಗರ ಪೊಲೀಸರು, ಮಾರಕಾಸ್ತ್ರಗಳಿಗಾಗಿ ತಪಾಸಣೆ ನಡೆಸಿದರು. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರ ನಿರ್ದೇ ಶನದ ಮೇರೆಗೆ ಡಿಸಿಪಿ ಡಾ.ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ…

ವಿಷ ಪ್ರಸಾದ ಆರೋಪಿಗಳ ಪರ ವಕಾಲತು ವಿರೋಧಿಸಿ ಪ್ರತಿಭಟನೆ
ಮೈಸೂರು

ವಿಷ ಪ್ರಸಾದ ಆರೋಪಿಗಳ ಪರ ವಕಾಲತು ವಿರೋಧಿಸಿ ಪ್ರತಿಭಟನೆ

January 1, 2019

ಮೈಸೂರು,ಡಿ.31(ಎಂಟಿವೈ)- ಚಾಮರಾಜ ನಗರ ಜಿಲ್ಲೆಯ ಹನೂರು ಹೋಬಳಿ ಕಿಚ್ ಗುತ್ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿ 17 ಜನರ ಸಾವಿಗೆ ಕಾರಣ ರಾದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಮೈಸೂರಿನ ನ್ಯಾಯಾ ಲಯದ ಮುಂದೆ ಮಹಾತ್ಮಗಾಂಧಿ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಆರೋಪಿಗಳ ಪರ ವಕಾಲತ್ತು ವಹಿಸ ಬಾರದೆಂದು ಚಾಮರಾಜನಗರ ಜಿಲ್ಲೆಯ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಮೈಸೂರು ಜಿಲ್ಲಾ ವಕೀಲರ ಸಂಘವೂ ಇದೇ ನಿರ್ಣಯ ಅಂಗೀಕರಿಸಿ…

ಇಂದು ಬ್ರಾಹ್ಮಣ ಸಂಘದ   ಅಧ್ಯಕ್ಷ ಡಿ.ಟಿ.ಪ್ರಕಾಶ್ ಹುಟ್ಟುಹಬ್ಬ
ಮೈಸೂರು

ಇಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹುಟ್ಟುಹಬ್ಬ

January 1, 2019

ಮೈಸೂರು, ಡಿ. 31- ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಹಾಗೂ ಶಾಶ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ನಾಳೆ (ಜ. 1) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಅಂಗವಾಗಿ ಸೋಮವಾರ ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ವಿಪ್ರ ಸಹಾಯವಾಣಿ ವತಿಯಿಂದ ಡಿ.ಟಿ. ಪ್ರಕಾಶ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್….

1 149 150 151 152 153 194
Translate »