Tag: Mysuru

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸಖಂಡಿಸಿ ಎಬಿವಿಪಿ ಪ್ರತಿಭಟನೆ
ಮೈಸೂರು

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸಖಂಡಿಸಿ ಎಬಿವಿಪಿ ಪ್ರತಿಭಟನೆ

May 4, 2019

ಮೈಸೂರು: ಮಹಾ ರಾಷ್ಟ್ರದ ಗಡಚಿರೊಳ್ಳಿಯಲ್ಲಿ ನಕ್ಸಲರು ಯೋಧರ ಮೇಲೆ ನಡೆಸಿದ ದಾಳಿಯಿಂದ 16 ಯೋಧರು ಹುತಾತ್ಮರಾಗಿದ್ದು, ನಕ್ಸಲರ ಕೃತ್ಯ ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಕ್ಸಲರು ಬಾಂಬ್ ಸ್ಫೋಟಿಸಿದ್ದರಿಂದ ಅಮಾಯಕ 16 ಮಂದಿ ವಿಶೇಷ ಕಮಾಂ ಡೋಗಳು ಹುತಾತ್ಮರಾಗಿದ್ದಾರೆ. ಇದು ನಕ್ಸಲರ ಹೇಯ ಕೃತ್ಯವಾಗಿದೆ. ಈ ಕೂಡಲೇ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ, ನಕ್ಸಲರ ಹತ್ತಿಕ್ಕಬೇಕೆಂದು ಒತ್ತಾ ಯಿಸಿದರು. ಎಬಿವಿಪಿ…

ಮೇ 5, 6ರಂದು ಅಕ್ಕ ಮಹಾದೇವಿ, ಬಸವ ಜಯಂತಿ ಆಚರಣೆ
ಮೈಸೂರು

ಮೇ 5, 6ರಂದು ಅಕ್ಕ ಮಹಾದೇವಿ, ಬಸವ ಜಯಂತಿ ಆಚರಣೆ

May 4, 2019

ಮೈಸೂರು: ಮೈಸೂರಿನ ಶ್ರೀ ಹೊಸಮಠದ ಶ್ರೀ ನಟರಾಜ ಸಭಾ ಭವನ ದಲ್ಲಿ ಮೇ 5 ಮತ್ತು 6ರಂದು ಅಕ್ಕ ಮಹಾದೇವಿ ಮತ್ತು ಬಸವ ಜಯಂತಿ ಕಾರ್ಯಕ್ರಮ ಏರ್ಪ ಡಿಸಲಾಗಿದೆ. ಮೇ 5 ರಂದು ಬೆಳಿಗ್ಗೆ 7 ಗಂಟೆಗೆ ವಿದ್ವಾನ್ ಶ್ರೀ ಗುರುಶಾಂತ ಸ್ವಾಮಿಗಳ 24ನೇ ಪುಣ್ಯಾರಾಧನೆ ನಡೆಯಲಿದ್ದು, ನಂತರ ಬೆಳಿಗ್ಗೆ 9 ಗಂಟೆಗೆ ಲಿಂಗಾ ಯಿತ ಹೆಣ್ಣು ಮಕ್ಕಳಿಗೆ ಲಿಂಗದೀಕ್ಷಾ ಸಂಸ್ಕಾರ ಕಾರ್ಯಕ್ರಮ ನಡೆಯಲಿದೆ. ಕಾರ್ಯ ಕ್ರಮದ ನೇತೃತ್ವವನ್ನು ಹುಣಸೂರು ತಾಲೂಕು ಮಾದಳ್ಳಿ ಉಕ್ಕಿನಕಂತೆ ಮಠದ ಅಧ್ಯಕ್ಷ…

ಮೈಸೂರಲ್ಲಿ ಬಿಡಾಡಿ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭ
ಮೈಸೂರು

ಮೈಸೂರಲ್ಲಿ ಬಿಡಾಡಿ ಹಂದಿ ಹಿಡಿಯುವ ಕಾರ್ಯಾಚರಣೆ ಆರಂಭ

May 4, 2019

ಮೈಸೂರು: ಸ್ವಚ್ಛತೆ ಹಾಳು ಮಾಡಿ, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವ ಬಿಡಾಡಿ ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಮೈಸೂರು ಮಹಾ ನಗರಪಾಲಿಕೆಯು ಇಂದಿನಿಂದ ಆರಂಭಿಸಿದೆ. ರಸ್ತೆ ಬದಿ, ಕೊಳಚೆ ತಗ್ಗು ಪ್ರದೇಶ, ಶಾಲೆ, ಅಂಗನವಾಡಿಗಳಂತಹ ಸಾರ್ವಜನಿಕ ಸ್ಥಳ ದಲ್ಲಿ ಅಡ್ಡಾಡಿ ಅನೈರ್ಮಲ್ಯ ಉಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುವುದಲ್ಲದೆ, ವಾಹನ ಸಂಚಾರಕ್ಕೂ ಈ ಹಂದಿಗಳು ತೊಂದರೆ ಮಾಡುತ್ತಿವೆ ಎಂಬ ದೂರು ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಪಶುಪಾಲನಾ ವಿಭಾಗವು ಹಂದಿ ಹಿಡಿಯುವ ಕಾರ್ಯಾ…

ಕಾಯಕ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ಕಾಯಕ ಸೇವಾ ಪ್ರಶಸ್ತಿ ಪ್ರದಾನ

May 4, 2019

ಮೈಸೂರು: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರು ಶರಣ ಮಂಡಲಿ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿಗೆ ಶುಕ್ರವಾರ ಕಾಯಕ ಸೇವಾ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ `ಮೈಸೂರು ಮಿತ್ರ’ ಹಿರಿಯ ವರದಿಗಾರ ಎಸ್.ಟಿ. ರವಿಕುಮಾರ್, ಮಹಾಲಕ್ಷ್ಮೀ ಟಿಫಾನೀಸ್ ಮಾಲೀಕ ಮಲ್ಲೇಶ್, ಮುಡಾ ಸಹಾಯಕ ಕಾರ್ಯಪಾಲಕ ಸಿ.ಎನ್.ಲಕ್ಷ್ಮೀಶ್, ಪಬ್ಲಿಕ್ ಟಿವಿಯ ಕೆ.ಪಿ.ನಾಗರಾಜು, ಸೋಮಶೇಖರ್, ಛಾಯಾಗ್ರಾಹಕ ರವಿ ಗವಿಮಠ, ಸಂದೇಶ್ ದಿ ಪ್ರಿನ್ಸ್ ಪಿಆರ್‍ಓ ಎಂ.ಎಲ್. ಶಿವಪ್ರಕಾಶ್ ಅವರಿಗೆ ಪ್ರಶಸ್ತಿ…

`ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರ
ಮೈಸೂರು

`ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರ

May 4, 2019

ಮೈಸೂರು:ಮೈಸೂರು ನಗರ ಸಾರಿಗೆ ವಿಭಾಗವು ಸಾರ್ವಜನಿಕರ ಪ್ರಯಾಣಕ್ಕಾಗಿ `ಕೈ ತೋರಿದಲ್ಲಿ ನಿಲ್ಲುವೆ’ ಮಾದರಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ `ಕೈ ತೋರಿದಲ್ಲಿ ನಿಲ್ಲುವೆ’ ಎಂಬ ಮಾರ್ಗ ಸಂಖ್ಯೆ 244ರ 10ವಾಹನಗಳ ಸಂಚಾರಕ್ಕೆ ಹೆಚ್.ಡಿ.ಕೋಟೆ ಮಾರ್ಗದ ಮಹಿಳಾ ಪ್ರಯಾಣಿಕರು ಚಾಲನೆ ನೀಡಿದರು. ಈ ವಾಹನಗಳು ನಗರ ಬಸ್ ನಿಲ್ದಾಣ-ಜಯಪುರ-ಹಂಪಾಪುರ-ಹೊಮ್ಮರಗಳ್ಳಿ-ಕೊಳಗಾಲ-ಕೋಟೆ ಹ್ಯಾಂಡ್ ಪೋಸ್ಟ್ ತಲುಪಿ, ಮತ್ತೆ ಅದೇ ಮಾರ್ಗವಾಗಿ ನಗರ ಬಸ್ ನಿಲ್ದಾಣ ತಲುಪಲಿವೆ. ಪ್ರಯಾಣಿಕರು, ವಿದ್ಯಾರ್ಥಿಗಳು, ವಿಕಲಚೇತನರು,…

ರಂಗಾಯಣ ಚಿಣ್ಣರ ಮೇಳದಲ್ಲಿ ನಟ ಸುಂದರರಾಜ್ ನೀತಿ ಪಾಠ
ಮೈಸೂರು

ರಂಗಾಯಣ ಚಿಣ್ಣರ ಮೇಳದಲ್ಲಿ ನಟ ಸುಂದರರಾಜ್ ನೀತಿ ಪಾಠ

May 4, 2019

ಮೈಸೂರು: ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗದೇ, ನಮ್ಮ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಉಳಿಸಿ- ಬೆಳೆಸಬೇಕು ಎಂದು ಹಿರಿಯ ನಟ ಸುಂದರ್‍ರಾಜ್ ತಿಳಿಸಿದರು. ನಗರದ ಕಲಾಮಂದಿರದ ಆವರಣದಲ್ಲಿ ಗುರುವಾರ ರಂಗಾ ಯಣವು ‘ಚಿಣ್ಣರ ಮೇಳದ’ ಅಂಗವಾಗಿ ಆಯೋಜಿಸಿದ್ದ ‘ಜೋಗಿ ಗೊಂದು ಅಂಗಿ’ ಕಾರ್ಯಕ್ರಮವನ್ನು ಜೋಗಿಗೆ ಬಟ್ಟೆಯೊಂದನ್ನು ತೊಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಂದುಕೊಂಡಂತೆ ಜೀವನ ನಡೆಸಲು ಸಾಧ್ಯವಿಲ್ಲ. ಆದರೆ, ಅಂದುಕೊಳ್ಳದಿರುವುದು ಜೀವನದಲ್ಲಿ ದೊರೆತಾಗ ಅದನ್ನು ಸಂತೋಷದಿಂದ ಸ್ವೀಕರಿಸಬೇಕು. ಹಾಗೇ ಸ್ವೀಕರಿಸುವವರು ಖುಷಿಯಾಗಿರುತ್ತಾರೆ. ಸತ್ಯ ಎನ್ನುವುದು ನಮ್ಮ ದೇಶದ…

ತೊಳಸಿ ಜ್ಯುವೆಲ್ಸ್‍ನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣ ಪ್ರದರ್ಶನ; ರೂಪದರ್ಶಿಯರ ರ್ಯಾಪ್ ವಾಕ್
ಮೈಸೂರು

ತೊಳಸಿ ಜ್ಯುವೆಲ್ಸ್‍ನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣ ಪ್ರದರ್ಶನ; ರೂಪದರ್ಶಿಯರ ರ್ಯಾಪ್ ವಾಕ್

May 4, 2019

ಮೈಸೂರು: ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ತೊಳಸಿ ಜ್ಯುವೆಲ್ಸ್‍ನಲ್ಲಿ ಶುಕ್ರವಾರ ರೂಪ ದರ್ಶಿಯರು ಅತ್ಯಾಕರ್ಷಕ ಫಾರ್ ಎವರ್ ಮಾರ್ಕ್ ವಜ್ರಾಭರಣವನ್ನು ಧರಿಸಿ, ಪ್ರದರ್ಶಿಸಿದರು. ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಆಯ್ದ ವಜ್ರಾಭರಣಗಳನ್ನು ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಏರ್ಪಡಿಸ ಲಾಗಿದ್ದ ಫ್ಯಾಶನ್ ಶೋನಲ್ಲಿ ಫಾರ್ ಎವರ್ ಮಾರ್ಕ್ ವಜ್ರಾಭರಣಗಳನ್ನು ಧರಿಸಿ, ರ್ಯಾಪ್ ಮೇಲೆ ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ಸೆಟ್ಟಿಂಗ್‍ಗಳು ಮತ್ತು ಟ್ರಿಬ್ಯೂಟ್ ಕಲೆಕ್ಷನ್‍ನ ಅಭರಣಗಳು ಪ್ರೇಕ್ಷಕರ ಗಮನ ಸೆಳೆದವು. ಜ್ಯುವೆಲ್ಸ್‍ನಲ್ಲಿ ಲೇಸರ್ ಲೈಟ್ ಅಳವಡಿಸಿರುವುದರಿಂದ ಗ್ರಾಹಕರಿಗೆ ವಿಶೇಷ ಅನುಭವ ನೀಡುವಂತಿದೆ….

ಒಡೆದ ಮನಸುಗಳನ್ನು ಒಗ್ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್
ಮೈಸೂರು

ಒಡೆದ ಮನಸುಗಳನ್ನು ಒಗ್ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್

May 4, 2019

ಮೈಸೂರು: ದೇಶ ದಲ್ಲಿ ಒಡೆದ ಮನಸ್ಸುಗಳನ್ನು ಒಂದು ಗೂಡಿಸಿದ ದೇಶಪ್ರೇಮಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಹಿರಿಯ ರಂಗ ಕರ್ಮಿ, ಚಿಂತಕ ಹೆಚ್.ಜನಾರ್ಧನ್ (ಜನ್ನಿ) ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ಕಾನೂನು ಶಾಲೆಯಲ್ಲಿ ಶುಕ್ರ ವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯ ಕ್ರಮ ದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪಡೆ ಯುವ ಸಮಯದಲ್ಲಿ ಜಿನ್ನಾ ಅವರ ನಿಲು ವನ್ನೇ ಅಂಬೇಡ್ಕರ್ ಅನುಸರಿಸಿದ್ದರೆ ಹೊಡೆ ದಾಟ, ರಕ್ತಪಾತಗಳೇ ಆಗುತ್ತಿತ್ತು. ಆದರೆ ಅಂಬೇಡ್ಕರ್ ಅವರ ಇಚ್ಛಾಶಕ್ತಿ, ದೇಶ ಪ್ರೇಮ…

ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ
ಮೈಸೂರು

ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ

May 4, 2019

ಮೈಸೂರು: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್. ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಂಘದ ಪದಾಧಿಕಾರಿಗಳು, ಮುಖಂಡರು ಮೌನಾಚರಣೆ ಮಾಡಿ ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಟಿ. ಪ್ರಕಾಶ್, ಸ್ವಾತಂತ್ರ್ಯಾ ನಂತರ ಪ್ರಜಾ ಪ್ರಭುತ್ವದಲ್ಲಿ ರಾಜಕೀಯ ವಿಡಂಬನೆ, ಟೀಕೆ…

ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ
ಮೈಸೂರು

ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ

May 4, 2019

ಮೈಸೂರು: ಜಮೀನಿನಲ್ಲಿ ಊಟದ ನಂತರ ಮಜ್ಜಿಗೆ ಸೇವಿ ಸಿದ್ದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಗ್ರಾಮದ ಮಹದೇವಶೆಟ್ಟಿ(40), ನಾಗ ಶೆಟ್ಟಿ(40), ಸುಂದರಮ್ಮ(22), ಬೆಳ್ಳಮ್ಮ (50), ಅಖಿಲ್(4), ಸುಭಾಷ್(7), ಕಿಶೋರ್(2), ಸೇರಿದಂತೆ ಅಸ್ವಸ್ಥರಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕ್ಕತಮ್ಮ ಎಂಬುವರ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದಾಗ ಎಲ್ಲರೂ ಮಧ್ಯಾಹ್ನ 2.30 ಗಂಟೆ ವೇಳೆಗೆ ಊಟ ಮಾಡಿದ ನಂತರ ಬಿಸಿಲಿನ…

1 2 3 4 5 6 194
Translate »