Tag: Mysuru

ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ
ಮೈಸೂರು

ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ

May 4, 2019

ಮೈಸೂರು: ವಿಶ್ವ ಪತ್ರಿಕಾ ದಿನದ ಪ್ರಯುಕ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪತ್ರಕರ್ತರಿಗೆ ಶುಭಾ ಶಯ ತಿಳಿಸಿದ್ದಾರೆ. ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಸಿದ್ದಾಂತಗಳ ರಕ್ಷಣೆ ಮತ್ತು ಕೆಲಸದ ನಿರ್ವಹಣೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸುವುದು ಈ ದಿನದ ಮುಖ್ಯ ಉದ್ದೇಶ. ಯುನೆಸ್ಕೋದ ಈ ಸದುದ್ದೇಶ ಈಡೇರಲಿ. ಕಾರ್ಯನಿರತ ಪತ್ರಕರ್ತರಿಗೆ ರಕ್ಷಣೆ ಸಿಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ
ಮೈಸೂರು

ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ

May 4, 2019

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ 31 ವಿಷಯಗಳಿಗೆ ಪ್ರವೇಶಾತಿ ಮುಂದಿನ ವಾರ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಆಗಸ್ಟ್ 31 ರೊಳಗೆ ಪ್ರವೇಶಾತಿ ಪಡೆಯಬಹುದು ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ಮುಕ್ತ ವಿವಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಘೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್‍ಎಲ್‍ಎಂ ಹೊರತುಪಡಿಸಿ ಉಳಿದೆಲ್ಲಾ ಕೋರ್ಸುಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಒಪ್ಪಿಗೆ ಪಡೆದುಕೊಂಡು ಎಲ್‍ಎಲ್‍ಎಂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಯುಜಿಸಿ ಮುಕ್ತ ವಿವಿಗೆ 2018-19ನೇ ಸಾಲಿನಿಂದ 2022-23ನೇ…

ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ
ಮೈಸೂರು

ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ

May 4, 2019

ಮೈಸೂರು: ಮೈಸೂರು ತಾಲೂಕಿನ ಹಿನಕಲ್ ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‍ಯು ಸಿಐ) ಆಶ್ರಯದಲ್ಲಿ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಮತ್ತು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿ ಭಟನೆ ನಡೆಸಲಾಯಿತು. ಮೈಸೂರಿನ ಕೂಗಳತೆ ದೂರದಲ್ಲಿರುವ ಹಿನಕಲ್‍ನಲ್ಲಿ ಕುಡಿಯುನ ನೀರಿಗಾಗಿ ಜನತೆ ಪ್ರತಿದಿನ ಪರದಾಡುತ್ತಿದ್ದಾರೆ. ಮಹಿಳೆ ಯರು, ಮಕ್ಕಳು ತಮ್ಮ ಕೆಲಸಗಳನ್ನು ಬಿಟ್ಟು ನೀರಿಗಾಗಿ ಗಂಟೆಗಟ್ಟಲೆ ಕಾದು ಕೆಲ ವೊಮ್ಮೆ ಖಾಲಿ…

ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ
ಮೈಸೂರು

ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ

May 4, 2019

ಮೈಸೂರು: ಮೈಸೂರು ನಗರದ ಪ್ರದೇಶ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅತ್ಯಂತ ಕಳಪೆಯಾಗಿದೆ. ಕಳೆದ ಮಾರ್ಚ್-ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯ ಶೇಕಡಾವಾರು ಫಲಿತಾಂಶದಲ್ಲಿ ಪಿರಿಯಾ ಪಟ್ಟಣ ತಾಲೂಕು (ಶೇ.90.59) ಮೊದಲ ಸ್ಥಾನ ಪಡೆದಿದೆ. ಇಲ್ಲಿ ಶಿಕ್ಷಕರ ಸಮಸ್ಯೆ ನಡುವೆಯೂ ಮೊದಲ ಸ್ಥಾನ ಪಡೆದಿರುವುದು ವಿಶೇಷ. ಮೈಸೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 9 ಮತ್ತು 7ನೇ ಸ್ಥಾನ ಪಡೆದಿದೆ. ಉಳಿದಂತೆ ಕ್ರಮವಾಗಿ ಮೈಸೂರು ಗ್ರಾಮಾಂತರ (ಶೇ.89.77)2ನೇ ಸ್ಥಾನ, ನಂಜನಗೂಡು (ಶೇ.88.22)…

ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ
ಮೈಸೂರು

ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ

May 4, 2019

ಜಯಪುರ: ಮೈಸೂರು ತಾಲೂಕಿನ ಜಯಪುರ ಹೋಬಳಿ ಸಮೀಪ ಕಾಡಾನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತ ಗ್ರಾಮಗಳ ರೈತರ ಜಮೀನುಗಳಲ್ಲಿನ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟಲು ಹರಸಹ ಪಡುತ್ತಿದ್ದಾರೆ. ಹೋಬಳಿಯ ಚಿಕ್ಕನಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ವಾರದಿಂದ ಎರಡು ಕಾಡಾನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಅಪಾರ ಬೆಳೆಗಳನ್ನು ನಾಶ ಮಾಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಬೆಟ್ಟದಬೀಡು ಸಮೀಪದ ಕೋಣನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಆನೆಗಳನ್ನು…

ಈ ವಾಹನಗಳಿಗೆ ನೀವಾ ವಾರಸುದಾರರು!
ಮೈಸೂರು

ಈ ವಾಹನಗಳಿಗೆ ನೀವಾ ವಾರಸುದಾರರು!

May 4, 2019

ಮೈಸೂರು: ಅಪಘಾತ, ತಪಾಸಣೆ ಇನ್ನಿತರ ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾಗಿರುವ ವಿವಿಧ ಮಾದರಿಯ ದ್ವಿಚಕ್ರ ವಾಹನಗಳು ಹಾಗೂ ಆಟೋಗಳ ಮಾಲೀಕರ ಪತ್ತೆಗೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆ ನೀಡಿದ್ದಾರೆ. ದಕ್ಷಿಣ ಪೊಲೀಸ್ ಠಾಣೆ ಆವರಣದಲ್ಲಿರುವ 5 ಆಟೋ ಹಾಗೂ 32 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆಗೆ ಅನೇಕ ಬಾರಿ ಪ್ರಯತ್ನಿಸಿದರೂ ಪ್ರಯೋಜವಾಗಿಲ್ಲ. ಹಾಗಾಗಿ ಈ ವಾಹನಗಳ ಮಾಲೀಕರಿದ್ದಲ್ಲಿ ವಾರದೊಳಗೆ ಅಗತ್ಯ ದಾಖಲೆ ಯೊಂದಿಗೆ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಜಯಪ್ರಕಾಶ್ ಅವರನ್ನು ಭೇಟಿ ಮಾಡ ಬೇಕು. ಮಾಲೀಕರ…

ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ
ಮೈಸೂರು

ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ

May 4, 2019

ಹುಣಸೂರು: ಇಲ್ಲಿನ ತಾಪಂ ಉಪಾಧ್ಯಕ್ಷ ಪ್ರೇಮ್‍ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಉದ್ದೂರ್ ಪ್ರೇಮೇಗೌಡ ಸರ್ವಾನುಮತದಿಂದ ಆಯ್ಕೆಯಾದರು. ಕಲ್ಕುಂದ ಕ್ಷೇತ್ರದ ಹೆಚ್.ಪ್ರೇಮ್‍ಕುಮಾರ್ ಒಪ್ಪಂದದಂತೆ ರಾಜೀನಾಮೆ ನೀಡಿದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ನಿಗದಿಪಡಿಸಿದಂತೆ ಇಂದು ತಾಪಂ ಸಭಾಗಂಗಣದಲ್ಲಿ ಚುನಾವಣೆ ನಡೆಯಿತು. 23 ಸದಸ್ಯರ ಪೈಕಿ 14 ಸದಸ್ಯರು ಭಾಗವಹಿಸಿ ತೆರವಾಗಿದ್ದ ಸ್ಥಾನಕ್ಕೆ ಉದ್ದೂರ್‍ಕಾವಲ್ ಕ್ಷೇತ್ರದ ಎಸ್.ಪ್ರೇಮೆಗೌಡರನ್ನು ಆಯ್ಕೆಗೆ ಸರ್ವಾನುಮತದಿಂದ ಸಮ್ಮತಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ತಟ್ಟೆಕೆರೆ ಶ್ರೀನಿವಾಸ್ ಅವರ ಹೆಸರನ್ನು ಸೂಚಿಸಲಾಗಿತ್ತಾದರೂ ಕೊನೆ…

ನಾಳೆ ವೇಲುಕ್ಕುಡಿ ಕೃಷ್ಣನ್ ಸ್ವಾಮಿಯವರಿಂದ ವಿಶೇಷ ಉಪನ್ಯಾಸ
ಮೈಸೂರು

ನಾಳೆ ವೇಲುಕ್ಕುಡಿ ಕೃಷ್ಣನ್ ಸ್ವಾಮಿಯವರಿಂದ ವಿಶೇಷ ಉಪನ್ಯಾಸ

May 3, 2019

ಮೈಸೂರು: ಮೈಸೂರಿನ ನಗರದಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯ ಲ್ಲಿರುವ ಮೇಲು ಕೋಟೆಯ ಯದು ಗಿರಿಯತಿ ರಾಜ ಶಾಖಾ ಮಠ ದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 5ರಂದು ಬೆಳಿಗ್ಗೆ 10.30ಕ್ಕೆ ನಾಡಿನ ಪ್ರಖ್ಯಾತ ಉಪನ್ಯಾಸಕ ಶ್ರೀ ವೇಲು ಕ್ಕುಡಿ ಕೃಷ್ಣನ್ ಸ್ವಾಮಿಯವರಿಂz À‘ಯಾದವಾದ್ರಿ ನರಸಿಂಹ ಮಹಾತ್ಮೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ.ಆರ್. ಯೋಗಾನರಸಿಂಹನ್ (ಮುರುಳಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ
ಮೈಸೂರು

ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

May 3, 2019

ಬೆಂಗಳೂರು: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅನಾರೋಗ್ಯದಿಂದ ಇಂದಿಲ್ಲಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹಿರಣ್ಣಯ್ಯ ಅವರು ಪತ್ನಿ ಹಾಗೂ ಐವರು ಮಕ್ಕಳು, ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಶ್ರೀನಾಥ್, ದೇವರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರೋದ್ಯಮದ ಅನೇಕ ಗಣ್ಯರು ಮಾಸ್ಟರ್ ಹಿರಣ್ಣಯ್ಯ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಕಲ ವಿಧಿ-ವಿಧಾನಗಳೊಂದಿಗೆ ಹಿರಣ್ಣಯ್ಯ ಅವರ…

ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ
ಮೈಸೂರು

ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ

May 3, 2019

ಮೈಸೂರು: ರಾಜ್ಯ ಚುನಾವಣಾ ಆಯೋಗವು ರಾಜ್ಯದ 63 ಸ್ಥಳೀಯ ಸಂಸ್ಥೆ ಗಳ ಚಾನ್ಸಿಲರ್‍ಗಳ ಆಯ್ಕೆಗಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. 8 ನಗರಸಭೆ, 33 ಪುರಸಭೆ ಮತ್ತು 22 ಪಟ್ಟಣ ಪಂಚಾಯಿತಿಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. ಆಯಾ ಜಿಲ್ಲಾಧಿ ಕಾರಿಗಳು ಮೇ 9ರಂದು ಅಧಿಸೂಚನೆ ಹೊರಡಿ ಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 16ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು,…

1 3 4 5 6 7 194
Translate »