ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 90 ದಿನಗಳ ಕಾಲ ಆಯೋ ಜಿಸಿರುವ ದಸರಾ ವಸ್ತು ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದಸರಾ ವಸ್ತು ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಬೀಸು ಕಂಸಾಳೆ, ನಂದಿದ್ವಜ ಮತ್ತಿತರೆ ಕಲಾತಂಡಗಳು ಭವ್ಯ ಸ್ವಾಗತ ನೀಡಿದವು. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ವಸ್ತು ಪ್ರದ ರ್ಶನ ಆವರಣ ಬಹುತೇಕ ಖಾಲಿ ಯಾಗಿದ್ದು, ಖಾಸಗಿಯ 136 ಮಳಿಗೆಗಳಲ್ಲಿ 80, 95 ಆಹಾರ ಮಳಿಗೆಗಳಲ್ಲಿ 50 ಹಾಗೂ 45 ಸರ್ಕಾರಿ ಮಳಿಗೆಗಳಲ್ಲಿ 32 ಮಳಿಗೆಗಳು ಮಾತ್ರ ಸಿದ್ಧಗೊಂಡಿವೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ. ಮಹೇಶ್, ಎನ್.ಮಹೇಶ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ಜ್ಯೋತಿ, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.