ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ
ಮೈಸೂರು

ವಿಜಯನಗರ ಜಲ ಸಂಗ್ರಹಾಗಾರಗಳ ಪುನರ್ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ

September 6, 2018

ಮೈಸೂರು: ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ 27.27 ಕೋಟಿ ರೂ. ವೆಚ್ಚದ ನಾಲ್ಕು ಭಾರೀ ಜಲ ಸಂಗ್ರಹಾಗಾರಗಳ ಕಾಮಗಾರಿ ಪ್ರಗತಿಯಲ್ಲಿದ್ದು, 2018ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಜಲ ಸಂಗ್ರಹಾಗಾರಕ್ಕೆ ಶಾಸಕ ಎಲ್.ನಾಗೇಂದ್ರರೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಒಟ್ಟು 27.27 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಶೆ.60ರಷ್ಟು ಕೆಲಸ ಪೂರ್ಣಗೊಂಡಿದ್ದು, ಈ ವರ್ಷದ ಡಿಸೆಂಬರ್ ಒಳಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.

ಈ ಹಿಂದೆ ಇದ್ದ ಜಲ ಸಂಗ್ರಹಾಗಾರಗಳ ಮೇಲ್ಛಾವಣಿ ಕುಸಿದು ಅದರೊಳಗೆ ಪ್ರಾಣಿ ಪಕ್ಷಿಗಳೆಲ್ಲಾ ಬಿದ್ದು, ಅವು ಕೊಳೆತು ನೀರು ಕಲುಷಿತವಾಗಿತ್ತಲ್ಲದೇ ಅಪಾಯ ಸಂಭವಿಸುವ ಆತಂಕ ಎದುರಾದ ಕಾರಣ ಕೇಂದ್ರದ ಅಮೃತ ಯೋಜನೆಯಡಿ ಹಳೆಯ ಕಟ್ಟೆ ನೆಲಸಮಗೊಳಿಸಿ ಹೊಸದಾಗಿ ಜಲಸಂಗ್ರಹಾಗಾರ ನಿರ್ಮಿಸಲಾಗುತ್ತಿದೆ ಎಂದು ಪ್ರತಾಪ್‍ಸಿಂಹ ತಿಳಿಸಿದರು.

4 ಮಿಲಿಯನ್ ಗ್ಯಾಲನ್ಸ್(1.8 ಕೋಟಿ ಲೀಟರ್) ಸಾಮಥ್ರ್ಯ, 6 ಎಂಜಿ(2.7 ಕೋಟಿ ಲೀಟರ್), 2ಎಂಜಿ(90 ಲಕ್ಷ ಲೀಟರ್) ಸಾಮಥ್ರ್ಯದ ತಲಾ ಒಂದೊಂದು ಜಲಸಂಗ್ರಹಾಗಾರ ಹಾಗೂ 13 ಮಿಲಿ ಯನ್(1.3 ಕೋಟಿ ಲೀಟರ್) ಸಾಮ ಥ್ರ್ಯದ ಮಾಸ್ಟರ್ ಬ್ಯಾಲೆನ್ಸಿಂಗ್ ಜಲ ಸಂಗ್ರಹಾಗಾರವನ್ನು ಏಕಕಾಲದಲ್ಲಿ ನಿರ್ಮಿ ಸಲಾಗುತ್ತಿದೆ. ಇಲ್ಲಿಂದ ಮೈಸೂ ರಿನ ಚಾಮರಾಜ ಕ್ಷೇತ್ರದ 16 ವಾರ್ಡ್‍ಗಳು, ಚಾಮುಂಡೇಶ್ವರಿಯ 1 ಹಾಗೂ ಎನ್‍ಆರ್ ವ್ಯಾಪ್ತಿಯ 1 ವಾರ್ಡ್ ವಸತಿ ಮನೆಗಳಿಗೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು ಎಂದು ಅವರು ತಿಳಿಸಿದರು.

2021ನೇ ಇಸವಿ ವೇಳೆಗೆ ಮೈಸೂರು ನಗರದ ಜನಸಂಖ್ಯೆ 13,43,000 ಆಗ ಬಹುದೆಂದು ಅಂದಾಜಿಸಿ, ಅದಕ್ಕಾಗಿ 274 ಎಂಎಲ್‍ಡಿ ಕುಡಿಯುವ ನೀರಿನ ಅಗತ್ಯ ವಿದೆ ಎಂಬುದನ್ನು ಪರಿಗಣಿಸಿ ಅಮೃತ ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಒಟ್ಟು 156 ಕೋಟಿ ರೂ. ಅನುದಾನವನ್ನು ಬಳಸ ಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಹೊಂಗಳ್ಳಿಯಲ್ಲಿ ಹೊಸ ಪಂಪ್‍ಹೌಸ್ ಮತ್ತು ಪ್ಯಾನೆಲ್ ಕೊಠಡಿ, ಮೇಳಾಪುರ ಮತ್ತು ರಮ್ಮನಹಳ್ಳಿಗೆ 66 ಕೆ.ವಿ. ಸಾಮಥ್ರ್ಯದ ನಿರಂತರ ವಿದ್ಯುತ್ ಸರಬ ರಾಜು ಮಾರ್ಗ, 66/6.6 ಕೆ.ವಿ, 8 ಎಂವಿಎ ಟ್ರಾನ್ಸ್‍ಫಾರ್ಮರ್ ಅಳವಡಿಸು ವುದು, 29.94 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನಗರಕ್ಕೆ ಹೆಚ್ಚುವರಿ ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಎಲ್ಲವೂ ಡಿಸೆಂಬರ್ ತಿಂಗಳೊಳಗಾಗಿ ಮುಕ್ತಾಯಗೊಳ್ಳಲಿದೆ ಎಂದೂ ಪ್ರತಾಪ್ ಸಿಂಹ ವಿವರಿಸಿದರು.

ಮಲೀನ ನೀರು ಶುದ್ಧೀಕರಿಸಲು ಕೆಸರೆ ಬಳಿ ಘಟಕ ಸ್ಥಾಪನೆ, ಹೊಸ ಪೈಪ್‍ಲೈನ್, ಹೈವೆ ಅಭಿವೃದ್ಧಿ ಸೇರಿದಂತೆ ಮೈಸೂರು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಮೃತ ಹಾಗೂ ನರ್ಮ್ ಯೋಜನೆ ಯಡಿ ಅನುದಾನ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.

ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಪ್ರಸನ್ನಮೂರ್ತಿ ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

Translate »