ಮಂಡ್ಯ

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!
ಮಂಡ್ಯ

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!

September 6, 2018

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಕಚೇರಿಯಲ್ಲಿ ಅಕ್ರಮವಾಗಿ ಲೆಕ್ಕಪತ್ರ ಗುಮಾಸ್ತ ಎಂಬ ಅನಗತ್ಯ ಹುದ್ದೆ ಸೃಷ್ಟಿಸಿಕೊಂಡು ಹೊರಗುತ್ತಿಗೆ ಮೇಲೆ ನೇಮಕವಾಗಿರುವ ವ್ಯಕ್ತಿಯನ್ನು ಸೇವೆಯಿಂದ ಬಿಡುಗಡೆ ಮಾಡಿ ಹುದ್ದೆರದ್ದುಪಡಿಸುವ ಸಂಬಂಧ ಕ್ರಮ ಜರುಗಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಮತ್ತು ಮುಜರಾಯಿ ಇಲಾಖೆಯ ಸಚಿವರು ನೀಡಿರುವ ಆದೇಶದಂತೆ ದೇವಾಲಯದಲ್ಲಿ ಅನಗತ್ಯವಾದ ಲೆಕ್ಕಪತ್ರ ಗುಮಾಸ್ತ ಹುದ್ದೆ ಸೃಷ್ಟಿಸಿ ನೇಮಕವಾಗಿರುವ ಹೇಮಂತಕುಮಾರ್ ಅವರನ್ನು ವಿಮುಕ್ತಿಗೊಳಿಸಿ ಹುದ್ದೆಯನ್ನು ರದ್ದು ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ. ದೇವಾಲಯದ ಮುಜರಾಯಿ ಇಲಾಖೆಯ ನೌಕರರ…

‘ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣ
ಮಂಡ್ಯ

‘ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣ

September 6, 2018

ಶ್ರೀರಂಗಪಟ್ಟಣ: ಪಟ್ಟಣದ ಶಾರದಾ ವಿಲಾಸ ಕಾಲೇಜಿನಲ್ಲಿ ಸೆ. 30ರಂದು ಬೆಳಿಗ್ಗೆ 10ಗಂಟೆಗೆ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆಯಿಂದ ಕಾದಂಬರಿಕಾರ ಡಾ.ಎಸ್‍ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ ಕಾದಂಬರಿಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಖ್ಯಾತ ಅಂಕಣಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್, ಖ್ಯಾತ ಚಿಂತಕ ಡಾ.ಗಿರೀಶ್ ಭಟ್, ಅಜಕ್ಕಳ, ವಿಮರ್ಶಕ ವಿದ್ವಾನ್ ಗ.ನಾ.ಭಟ್ಟ, ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ಅವರು ಪ್ರಬಂಧ ಮಂಡಿಸಲಿದ್ದಾರೆ. ಕುವೆಂಪು ಭಾಷಾ ಭಾರತೀ ಮಾಜಿ ಚೇರ್‍ಮನ್ ಡಾ.ಪ್ರಧಾನ ಗುರುದತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭೈರಪ್ಪ ಅವರು…

ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ
ಮಂಡ್ಯ

ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಸೇರ್ಪಡೆ

September 6, 2018

ಮದ್ದೂರು:  ಪಟ್ಟಣದ ಪುರ ಸಭೆಯ ಇಬ್ಬರು ಪಕ್ಷೇತರ ಸದಸ್ಯರು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸಮ್ಮುಖ ದಲ್ಲಿ ಬುಧವಾರ ಜೆಡಿಎಸ್ ಸೇರ್ಪಡೆ ಗೊಂಡರು. ಪುರಸಭೆ 2ನೇ ವಾರ್ಡ್‍ನ ಪಕ್ಷೇತರ ಸದಸ್ಯೆ ಶೋಭಾಮರಿ ಹಾಗೂ 8ನೇ ವಾರ್ಡಿನ ಸದಸ್ಯೆ ರತ್ನತಿಮ್ಮಯ್ಯ ಅವರು ಬೇಷರತ್‍ಆಗಿ ಜೆಡಿಎಸ್ ಸೇರಿದರು. ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಈ ಇಬ್ಬರು ಸದಸ್ಯರು ಮೂಲ ಜೆಡಿಎಸ್ ಸದಸ್ಯರಾಗಿದ್ದಾರೆ. ಇದೀಗ ಅವರು ಮತ್ತೇ ಪಕ್ಷಕ್ಕೆ ಹಿಂದಿರುಗಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಎಸ್.ಪಿ.ಸ್ವಾಮಿ, ಸಿ.ಕೆ.ಸ್ವಾಮಿಗೌಡ, ಅಭಿಷೇಕ್, ಜಗದೀಶ್, ನೀಲಕಂಠ,…

ಗೂಡ್ಸ್ ವಾಹನ ಅಡ್ಡಗಟ್ಟಿ 1.25ಲಕ್ಷ ದರೋಡೆ
ಮಂಡ್ಯ

ಗೂಡ್ಸ್ ವಾಹನ ಅಡ್ಡಗಟ್ಟಿ 1.25ಲಕ್ಷ ದರೋಡೆ

September 6, 2018

ಶ್ರೀರಂಗಪಟ್ಟಣ: ಬೇಕರಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಕಾರಿನಲ್ಲಿ ಅಡ್ಡಗಟ್ಟಿದ್ದ ಅಪರಿಚಿತ ಯುವಕರ ಗುಂಪು ಮಾರಕಾಸ್ತ್ರ ತೋರಿಸಿ 1.25 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತಾಲೂಕಿನ ಮರಳಗಾಲ ಗ್ರಾಮದ ಸಮೀಪ ಘಟನೆ ನಡೆದಿದ್ದು, ಬೇಕರಿಗಳಿಗೆ ಸಾಮಗ್ರಿ ಪೂರೈಸುತ್ತಿದ್ದ ಮೈಸೂರಿನ ವಿನೋದ್ ರಾಜ್ ಮತ್ತು ರವಿಕುಮಾರ್ ಎಂಬುವರಿಂದ ಅಪರಿಚಿತ ಯುವಕರ ಗುಂಪು ಹಣ ದೋಚಿದ್ದಾರೆ. ನಾಲ್ವರು ಖದೀಮರ ತಂಡ ಗೂಡ್ಸ್ ವಾಹನವನ್ನು ನಂಬರ್ ಪ್ಲೇಟ್ ಇಲ್ಲದ ಶ್ವಿಫ್ಟ್ ಕಾರಿನಲ್ಲಿ ಆಗಮಿಸಿ ಅಡ್ಡಗಟ್ಟಿದ್ದಾರೆ. ಬಳಿಕ ವಾಹನದ ಒಳಗಿದ್ದ ವಿನೋದ್…

ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ
ಮಂಡ್ಯ

ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ

September 4, 2018

ಮಂಡ್ಯ: ವಿಧಾನಸಭಾ ಚುನಾವಣೆ ಯಲ್ಲಿ ಜಿಲ್ಲೆಯ 7 ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಮೆರೆದಿದ್ದ ಜೆಡಿಎಸ್, ನಗರ ಸ್ಥಳೀಯ ಸಂಸ್ಥೆ ಚುನಾ ವಣೆಯಲ್ಲಿಯೂ ತನ್ನ ಪಾರುಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಪೈಕಿ 1 ನಗರಸಭೆ, 3 ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜೆಡಿಎಸ್ 1 ಪಟ್ಟಣ ಪಂಚಾಯಿತಿಗಷ್ಟೇ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿದೆ. ಮಂಡ್ಯ ನಗರಸಭೆ, ಪಾಂಡವಪುರ, ನಾಗ ಮಂಗಲ, ಮದ್ದೂರು ಪುರಸಭೆಗಳಲ್ಲಿ ಜೆಡಿಎಸ್ ತನ್ನ ಪಾರುಪತ್ಯ ಪ್ರತಿಷ್ಠಾಪಿಸಿದ್ದು, ಕಾಂಗ್ರೆಸ್ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ತನ್ನ…

ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ
ಮಂಡ್ಯ

ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ

September 4, 2018

ಪಾಂಡವಪುರ: ಪಾಂಡವಪುರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿ ಸುವ ಮೂಲಕ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿ ದಿದ್ದು ರೈತಸಂಘ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್-18, ಕಾಂಗ್ರೆಸ್-3, ರೈತಸಂಘ-1 ಮತ್ತು ಬಿಜೆಪಿ-1 ಸ್ಥಾನಗಳಿದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ 22 ವಾರ್ಡ್‍ಗಳ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿ ಒಟ್ಟು 96 ಮಂದಿ ಮತದಾರರು ನೋಟಾ ಚಲಾಯಿಸಿದ್ದಾರೆ. ವಾರ್ಡ್‍ವಾರು ಫಲಿತಾಂಶ: ವಾರ್ಡ್ 1: ಎಂ.ಜಯ ಲಕ್ಷ್ಮಿ (ಕಾಂಗ್ರೆಸ್)-258, ಜೆಡಿಎಸ್-216,…

ನಾಗಮಂಗಲ ಪುರಸಭೆ ಜೆಡಿಎಸ್, ಬೆಳ್ಳೂರು ಪಪಂ ಕಾಂಗ್ರೆಸ್ ವಶ
ಮಂಡ್ಯ

ನಾಗಮಂಗಲ ಪುರಸಭೆ ಜೆಡಿಎಸ್, ಬೆಳ್ಳೂರು ಪಪಂ ಕಾಂಗ್ರೆಸ್ ವಶ

September 4, 2018

ಹಾಲಿ ಶಾಸಕ ಸುರೇಶ್‍ಗೌಡ, ಮಾಜಿ ಶಾಸಕ ಎನ್.ಚಲುವರಾಯಸ್ವಾಮಿಗೆ ಸೋಲು-ಗೆಲುವಿನ ರುಚಿ ತೋರಿದ ಮತದಾರ ನಾಗಮಂಗಲ: ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ಪುರಸಭೆ ಮತ್ತು ಬೆಳ್ಳೂರು ಪಟ್ಟಣ ಪಂಚಾಯಿತಿ ಫಲಿತಾಂಶ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಿಹಿಕಹಿ ಅನುಭವ ನೀಡಿದೆ. ನಾಗಮಂಗಲ ಜೆಡಿಎಸ್-ಕಾಂಗ್ರೆಸ್ ಸಮಬಲದ ಹೋರಾಟ ನಡೆಸಿವೆಯಾದರೂ, ಜೆಡಿಎಸ್ 1 ಸ್ಥಾನದಿಂದಷ್ಟೇ ಮುಂದಿದೆ. ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರ ಅತಂತ್ರವಾಗುವ ಅವಕಾಶ ವನ್ನು ಮತದಾರ ಮಾಡಿಕೊಟ್ಟಿದ್ದಾನೆ. ಪುರಸಭೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಣಿಕೆ ಕೇಂದ್ರದಲ್ಲಿ ಬೆಳಗ್ಗೆ 8ಕ್ಕೆ…

ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ
ಮಂಡ್ಯ

ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ

September 4, 2018

ಮಂಡ್ಯ:  ಮದ್ದೂರು ಪುರಸಭೆ ಯಲ್ಲಿ ಜೆಡಿಎಸ್ ಸರಳ ಬಹುಮತ ದೊಂದಿಗೆ ಅಧಿಕಾರ ಹಿಡಿದಿದೆ. ಪುರ ಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ 3, ಬಿಜೆಪಿ 1 ಹಾಗೂ ಇತರರು 6 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ವಿಜೇತರ ಪಟ್ಟಿ: ವಾರ್ಡ್ 1: ಎಸ್. ಮಹೇಶ್ ಜೆಡಿಎಸ್ 560, ವಾರ್ಡ್ 2: ಶೋಭಾ ಮರಿ ಪಕ್ಷೇತರ 442, ವಾರ್ಡ್ 3: ಬಸವರಾಜ ಜೆಡಿಎಸ್ 402, ವಾರ್ಡ್ 4: ಪ್ರಿಯಾಂಕಾ ಅಪ್ಪುಗೌಡ ಪಕ್ಷೇತರ 368, ವಾರ್ಡ್ 5: ಕೋಕಿಲಾ ಅರುಣ್…

ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ಚುನಾವಣೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ನಾಳೆ ಮತದಾನ
ಮಂಡ್ಯ

ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ಚುನಾವಣೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ನಾಳೆ ಮತದಾನ

August 30, 2018

 286 ವಿದ್ಯುನ್ಮಾನ ಮತಯಂತ್ರ ಬಳಕೆ ಜಿಲ್ಲೆಯಲ್ಲಿ ಒಟ್ಟು 204 ಮತಗಟ್ಟೆ ಸ್ಥಾಪನೆ ಎಡಗೈನ ಉಂಗುರದ ಬೆರಳಿಗೆ ಶಾಯಿ ಮಂಡ್ಯ:  ಮಂಡ್ಯ ನಗರಸಭೆ ಸೇರಿ ದಂತೆ ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ಆರಂಭ ವಾಗಿದ್ದು, ಆ. 31 (ಶುಕ್ರವಾರ)ರಂದು ನಡೆಯುವ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಜಿಲ್ಲೆಯ ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5…

ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!
ಮಂಡ್ಯ

ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!

August 30, 2018

ಮಂಡ್ಯ:  ಮೈಸೂರು ಅರಸರ ಹೆಸರಿನಲ್ಲಿರುವ ಅದೆಷ್ಟೋ ಜಾಗಗಳನ್ನು ಪಟ್ಟಭದ್ರರು ಅಕ್ರಮವಾಗಿ ಲಪಟಾಯಿಸಿರುವುದು, ಲಪಟಾಯಿಸಲು ಸಂಚು ನಡೆಯುತ್ತಿರುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಅಂಥದ್ದೇ ಮತ್ತೊಂದು ರಾಜ ಮನೆತನ ಬಳಸುತ್ತಿದ್ದ ಜಾಗವನ್ನು ಪಟ್ಟಭದ್ರರು ಕಬಳಿಸಲು ಸಂಚು ನಡೆಸಿರುವ ಪ್ರಕರಣ ಶ್ರೀರಂಗಪಟ್ಟಣ ಸಮೀಪದ ಕಿರಂಗೂರು ಬಳಿ ನಡೆದಿದೆ. ಮೈಸೂರು ಅರಸರು ವಿಶ್ವವಿಖ್ಯಾತ ದಸರಾ ಉತ್ಸವವನ್ನು ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಿದ್ದರು ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ. ಅದರ ಕುರುಹಾಗಿ ಇಂದಿಗೂ ಕಿರಂಗೂರು ಬಳಿ ದಸರಾ ಮಂಟಪ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಈ ದಸರಾ…

1 69 70 71 72 73 108
Translate »