ಮೈಸೂರು, ನ.6(ಎಸ್‍ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಸ್ನೇಹ ಬಳಗದ ಸಂಸ್ಥಾಪಕ ಹೆಚ್.ವಿ. ರಾಜೀವ್ ಅವರ ಪರಿಸರ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಹೆಚ್.ವಿ.ರಾಜೀವ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ಅಭಿನಂದಿಸಿದರು. ಇದೇ ವೇಳೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ಯಾಥರಿನ್ ಕುನ್ಹಿರಾಮನ್, ಯೋಗ ಕ್ಷೇತ್ರದ…
ಫಲಾನುಭವಿಗಳು ಬಯಸಿದಷ್ಟು ಕಾಲ ಮೀಸಲಾತಿ ಇರಬೇಕೆಂಬುದೂ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ನಿಲುವು
November 7, 2021ಮೈಸೂರು,ನ.6(ಪಿಎಂ)- ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್‍ಎಸ್‍ಎಸ್) ಎಂದೂ ಮೀಸಲಾತಿ ವಿರೋಧಿಸಿಲ್ಲ. ಈ ಸೌಲಭ್ಯ ಪಡೆಯುವವರು ಸಾಕು ಎನ್ನು ವವರೆಗೂ ಇದು ಮುಂದುವರೆಯ ಬೇಕೆಂಬುದೂ ಸಂಘದ ನಿಲುವು. ಸಾಮಾಜಿಕ ಅಸಮಾನತೆ ನಿವಾರಣೆಗಾಗಿ ಮೀಸಲಾತಿ ಜಾರಿಯಲ್ಲಿದ್ದು, ಅದು ಅನಿವಾರ್ಯ ಎಂದು ಆರ್‍ಎಸ್‍ಎಸ್‍ನ ಬೆಂಗಳೂರು ನಗರ ಪ್ರಚಾರ ಪ್ರಮುಖ್ ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಹೋಟೆಲ್ ಸಂದೇಶ್ ಪ್ರಿನ್ಸ್ ಸಭಾಂಗಣದಲ್ಲಿ ಶನಿವಾರ ಆರ್‍ಎಸ್‍ಎಸ್ ವತಿಯಿಂದ ಹಮ್ಮಿಕೊಂಡಿದ್ದ `ಸಂಪಾದಕ ರೊಂದಿಗೆ ಸಂವಾದ’ದಲ್ಲಿ ಈ ವಿಚಾರವನ್ನು ಅವರು ಸ್ಪಷ್ಟಪಡಿಸಿದರು. ಹಿಂದಿನಿಂದಲೂ ಸಂಘ ಮೀಸಲಾತಿ…
ಪಟಾಕಿ ಸುಟ್ಟರೂ ಪದಾರ್ಥಗಳ ಬೆಲೆ ಸುಡದು
November 4, 2021ಮೈಸೂರು, ನ.೩(ಎಂಕೆ)- ಮೂರು ದಿನಗಳ ಕಾಲ ಸಡಗರ-ಸಂಭ್ರಮದೊAದಿಗೆ ಜರುಗುವ ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಹೂ, ಹಣ್ಣು-ತರಕಾರಿ, ದಿನಸಿ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗ ದಿರುವುದು, ಅಡುಗೆ ಎಣ್ಣೆ ಬೆಲೆ ಇಳಿಕೆ ಕಂಡಿರು ವುದು ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸಡಗರ-ಸಂಭ್ರಮದಿAದ ಆಚರಿಸಲು ಸಾಧ್ಯವಾಗಿರ ಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲು…
ಜಯದೇವ ಸೇರಿದಂತೆ ಮೈಸೂರಿನ ಆಸ್ಪತ್ರೆಗಳಲ್ಲಿ ಜನವೋ ಜನ
November 4, 2021ಮೈಸೂರು, ನ.೩(ಆರ್‌ಕೆ)-ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ಆತಂಕಗೊAಡಿರುವ ಜನರು ತಮ್ಮ ಹೃದಯದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಮುಗಿ ಬೀಳುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದ ೪೬ ವರ್ಷದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದಾಗಿ ಚಿಕಿತ್ಸೆ ಪಡೆ ಯಲೂ ಆಗದೇ ಸಾವನ್ನಪ್ಪಿದ ಘಟನೆಯಿಂದ ಗಾಬರಿ ಗೊಂಡಿರುವ ಎಲ್ಲಾ ವಯೋಮಾನದ ಜನರೂ ಮುಂಜಾಗ್ರತೆಯಾಗಿ ಹೃದಯ ಸುರಕ್ಷೆ ಖಾತರಿಪಡಿಸಿ ಕೊಳ್ಳಲು ಮುಂದಾಗಿದ್ದಾರೆ. ಕಳೆದ ಶನಿವಾರದಿಂದಲೇ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ…
35 ವರ್ಷ ಮೇಲ್ಪಟ್ಟ ಪುರುಷರು, 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಿ
November 4, 2021ಮೈಸೂರು, ನ. ೩(ಆರ್‌ಕೆ)- ೩೫ ವರ್ಷ ಮೇಲ್ಪಟ್ಟ ಪುರುಷರು ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳೆ ಯರು ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂ ರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರೂ ಆದ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದ ಹಠಾತ್ ವಿಧಿವಶರಾ ಗಿರುವುದರಿಂದ ಗಾಬರಿಗೊಂಡಿರುವ ಜನರು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನವೆಂಬರ್ ೧ರಂದು ೧,೨೦೦ ಮಂದಿ ಹಾಗೂ ನವೆಂಬರ್…
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಜಾಥಾ
November 4, 2021ಮೈಸೂರು, ನ.3(ಪಿಎಂ)- ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೇಂದ್ರ ವಿಚಕ್ಷಣ ಆಯೋಗದ ಜಾಗೃತಿ ಸಪ್ತಾಹದ ಅಂಗವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಪ್ರಾದೇಶಿಕ ಕಾರ್ಯಾಲಯದ ವತಿಯಿಂದ ಬ್ಯಾಂಕಿನ ಉದ್ಯೋಗಿಗಳು ಬುಧವಾರ ಜಾಥಾ ನಡೆಸಿದರು. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು `ಸ್ವತಂತ್ರ ಭಾರತ@75 ಸಮಗ್ರತೆಯ ಜೊತೆಯಲ್ಲಿ ಸ್ವಾವಲಂಬನೆ’ ಶೀರ್ಷಿಕೆಯಡಿ ಈ ಬಾರಿ ಅ.27ರಿಂದ ನ.2ರವರೆಗೆ ಜಾಗೃತಿ ಸಪ್ತಾಹ ಆಚರಿಸಲು ಕೇಂದ್ರ ವಿಚಕ್ಷಣ ಆಯೋಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಜಾಥಾ ನಡೆಸಲಾಯಿತು. ಮೈಸೂರಿನ ಬ್ಯಾಂಕ್‍ನ ಪ್ರಾದೇಶಿಕ ಕಚೇರಿ…
ದೊಡ್ಡ ಮೋರಿಗೆ ಬಿದ್ದಿದ್ದ ಕುದುರೆಗೆ `ಅಭಯ’
November 4, 2021ಮೈಸೂರು, ನ.3(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರದ ದೊಡ್ಡ ಮೋರಿ ಯೊಂದಕ್ಕೆ ಬಿದ್ದು ಒದ್ದಾಡುತ್ತಿದ್ದ ಕುದುರೆಯೊಂದನ್ನು ಮೈಸೂರು ನಗರಪಾಲಿಕೆ ಅಭಯ 1ನೇ ತಂಡದ ಸದಸ್ಯರು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಆಹಾರ ಅರಸಿ ಜೆ.ಪಿ.ನಗರದ ದೊಡ್ಡಮೋರಿಯತ್ತ ಬಂದ ಕುದುರೆ ಆಕಸ್ಮಿಕವಾಗಿ ಮೋರಿಯೊಳಗೆ ಬಿದ್ದಿತು. ರಾತ್ರಿಯಾದ್ದರಿಂದ ಇದನ್ನು ಯಾರೂ ಗಮನಿಸಲಿಲ್ಲ. ಇದರಿಂದ ಕುದುರೆ ಮೋರಿಯಲ್ಲಿಯೇ ಇಡೀ ರಾತ್ರಿ ಕಳೆಯುವಂತಾಯಿತು. ಬುಧವಾರ ಬೆಳಗ್ಗೆ ಸಾರ್ವಜನಿಕರಿಗೆ ಕುದುರೆ ನರಳುತ್ತಿದ್ದ ಶಬ್ದ ಕೇಳಿ ಸ್ಥಳಕ್ಕೆ ಹೋಗಿ ನೋಡಲಾಗಿ ಕುದುರೆ ಮೋರಿಗೆ ಬಿದ್ದಿರುವುದು ತಿಳಿಯಿತು. ತಕ್ಷಣ ಜನರು ಪಾಲಿಕೆ…
ಮೈಸೂರಲ್ಲಿ ರಸ್ತೆ ಸುರಕ್ಷತೆ, ಕಾನೂನು ನೆರವು ಕಾರ್ಯಕ್ರಮ
November 4, 2021ಮೈಸೂರು,ನ.3(ಆರ್‍ಕೆ)- ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನ. 1ರಂದು ರಸ್ತೆ ಸುರಕ್ಷತೆ ಮತ್ತು ಕಾನೂನು ನೆರವು ಕುರಿತ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಕಚೇರಿ (ಪೂರ್ವ ಮತ್ತು ಪಶ್ಚಿಮ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೆಎಸ್ ಆರ್‍ಟಿಸಿ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ದೇವರಾಜ ಬೂತೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಪಘಾತ ಸಂಭವಿಸದಂತೆ ಎಚ್ಚರ ವಹಿಸಿ ಪ್ರಯಾ…
ಬಿಡುಗಡೆಗಾಗಿ ಕಾಯುತ್ತಿರುವ ಮೈಸೂರಿನ 37 ಜೈಲು ಬಂಧಿಗಳು
November 4, 2021ಮೈಸೂರು, ನ. 3(ಆರ್‍ಕೆ)- ಸನ್ನಡತೆ ಆಧಾರದಲ್ಲಿ ಬಿಡುಗಡೆಯ ಭಾಗ್ಯ ನಿರೀಕ್ಷೆ ಯಲ್ಲಿರುವ ಮೈಸೂರು ಕೇಂದ್ರ ಕಾರಾ ಗೃಹದ 37 ಮಂದಿ ಕೈದಿಗಳು ಸರ್ಕಾ ರದ ಆದೇಶ ಎದುರು ನೋಡುತ್ತಿದ್ದಾರೆ. 2021ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬಿಡುಗಡೆಯಾಗಬೇಕಿ ತ್ತಾದರೂ, ಜೈಲುಗಳಿಂದ ಬಂದಿರುವ ಪ್ರಸ್ತಾವನೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ರಾಜ್ಯ ಮಟ್ಟದ ಸಮಿತಿ ಸಭೆಯೇ ನಡೆಯದಿರುವುದರಿಂದ ಕಳೆದ ಮೂರು ತಿಂಗಳಿಂದ ಬಿಡುಗಡೆ ಭಾಗ್ಯದ ನಿರೀಕ್ಷೆಯಲ್ಲಿದ್ದಾರೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ 850 ಬಂಧಿಗಳ ಪೈಕಿ 37 ಮಂದಿ ಯನ್ನು…
ಬ್ಯಾಂಕ್‍ಗಳಿಗೆ ನುಗ್ಗುವ ಹೋರಾಟದ ಎಚ್ಚರಿಕೆ
November 4, 2021ಮೈಸೂರು, ನ.3(ಆರ್‍ಕೆಬಿ)- ರಾಜ್ಯದಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದ್ದು, ಬ್ಯಾಂಕ್‍ಗಳು ಕೂಡಲೇ ಹಿಂದಿ ಹೇರಿಕೆ ಕೈಬಿಡದಿದ್ದರೆ ನ.21ರಂದು ಬ್ಯಾಂಕ್‍ಗಳ ವಿರುದ್ಧ ಭಾರೀ ಹೋರಾಟ ನಡೆಸಲಾಗುವುದು. ಅಗತ್ಯವಾದರೆ ಬ್ಯಾಂಕ್‍ಗಳಿಗೆ ನುಗ್ಗಿ ಪಾಠ ಕಲಿಸಲಾಗುವುದು ಎಂದು ಮಾಜಿ ಶಾಸಕ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಬ್ಯಾಂಕ್‍ಗಳಿಗೆ ಎಚ್ಚರಿಕೆ ನೀಡಿದರು. ಮೈಸೂರಿನ ಚಾಮರಾಜ ಒಡೆಯರ್ ವೃತ್ತದಲ್ಲಿ (ಆರ್ ಗೇಟ್) ಹಿಂದಿ ಹೇರಿಕೆ ವಿರುದ್ಧ ಘೋಷಣೆ ಕೂಗಿ, ಹಿಂದಿ ಹೇರಿಕೆ ಯನ್ನು ಕನ್ನಡಿಗರು ಸಹಿಸುವುದಿಲ್ಲ. ಕೂಡಲೇ ಹಿಂದಿ…










