ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ
ಕೊಡಗು

ವರುಣನ ರುದ್ರನರ್ತನಕ್ಕೆ ಕೊಡಗು ತತ್ತರ

July 14, 2018

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವರುಣನ ರೌದ್ರಾವತಾರ ಮುಂದುವರಿದಿದ್ದು, ಸದ್ಯಕ್ಕಂತು ಮಳೆ ಕರುಣೆ ತೋರುವ ಲಕ್ಷಣ ಕಂಡು ಬರು ತ್ತಿಲ್ಲ. ಕಳೆದ 9 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, 2 ದಿನಗಳಿಂದ ಗಾಳಿಯ ತೀವ್ರತೆ ಕಂಡು ಬಂದಿದೆ.

ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆ ತತ್ತರಿಸಿದ್ದು, ದಟ್ಟ ಮಂಜಿನೊಂದಿಗೆ ತೀವ್ರ ಚಳಿಯೂ ಕಂಡು ಬಂದಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕೃಷಿ ಕಾರ್ಯಗಳಿಗೂ ತೊಡಕುಂಟಾಗಿದೆ. ಶುಕ್ರ ವಾರ ಭಾರಿ ಗಾಳಿಯೊಂದಿಗೆ ಸುರಿದ ಧಾರ ಕಾರ ಮಳೆಗೆ ಮಡಿಕೇರಿ ಸಂತೆ ವ್ಯಾಪಾರ ದುಸ್ಥರಗೊಂಡಿದ್ದು, ಗ್ರಾಹಕರು ಮತ್ತು ತರಕಾರಿ ವರ್ತಕರು ಪರಿಪಾಟಲು ಅನು ಭವಿಸಬೇಕಾಯಿತು. ಕೆಲವು ವ್ಯಾಪಾರಿ ಗಳು ಮಳೆಯಿಂದ ರಕ್ಷಣೆ ಪಡೆಯಲು ಹೊದಿಸಿಕೊಂಡಿದ್ದ ಪ್ಲಾಸ್ಟಿಕ್ ಶೀಟ್‍ಗಳು ಭಾರಿ ಮಳೆ ಗಾಳಿಗೆ ಹಾರಿಹೋದ ಘಟನೆಯೂ ನಡೆದಿದೆ.

ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ತೊರೆಗಳು ಪ್ರವಾಹ ವನ್ನು ಸೃಷ್ಠಿಸಿದ್ದು, ನಾಪೋಕ್ಲು-ಭಾಗ ಮಂಡಲ ರಸ್ತೆಯ ಮೇಲೆ 5 ಅಡಿ ನೀರು ಹರಿಯುತ್ತಿದೆ. ತಮಿಳುನಾಡು ಮೂಲದ ಪ್ರವಾಸಿಗರ ತಂಡವೊಂದು ತಲಕಾವೇರಿಗೆ ತೆರಳಿ ನಾಪೋಕ್ಲು ಕಡೆಗೆ ವಾಹನದಲ್ಲಿ ಹೋಗುವ ಸಂದರ್ಭ ತುಂಬಿ ಹರಿಯುತ್ತಿರುವ ನದಿಯ ನಡುವೆ ಸಿಲುಕಿ ಕೊಂಡ ಘಟನೆಯೂ ನಡೆದಿದೆ. ಬಳಿಕ ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಸ್ಥಳೀಯರು ವಾಹನದಲ್ಲಿ ತುಂಬಿ ಹರಿಯುತ್ತಿರುವ ನದಿಯನ್ನು ದಾಟದಂತೆ ಎಚ್ಚರಿಸಿದರೂ, ಪ್ರವಾಸಿಗರು ನಿರ್ಲಕ್ಷ್ಯಿಸಿದ್ದರಿಂದ ಈ ಘಟನೆ ನಡೆದಿದೆ.

ನಾಪೋಕ್ಲು- ಅಯ್ಯಂಗೇರಿ ರಸ್ತೆ, ಚೆರಿಯಪರಂಬು-ಕಲ್ಲುಮೊಟ್ಟೆ ಹಾಗೂ ಬೊಳಿಬಾಣೆ ರಸ್ತೆಗಳು ಕಳೆದ 3 ದಿನಗಳಿಂದ ಸಂಪರ್ಕ ಕಳೆದು ಕೊಂಡಿದೆ. ಈ ರಸ್ತೆಗಳ ಸೇತುವೆಯ ಮೇಲೆ 3 ಅಡಿ ನೀರು ಹರಿಯುತ್ತಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಜಲದಿಗ್ಭಂದನ ವಿಧಿಸಿದಂತಾಗಿದೆ. ಕಾವೇರಿ ನದಿ ಪ್ರವಾಹ ರೂಪ ತಳದಿದ್ದು, ನಾಪೋಕ್ಲು, ಭಾಗ ಮಂಡಲ, ಎಮ್ಮೆಮಾಡು ವ್ಯಾಪ್ತಿಯಲ್ಲಿ ನದಿ ದಡದ ಗದ್ದೆಗಳಿಗೆ ನೀರು ನುಗ್ಗಿದ್ದು, ಇಂದಿಗೂ ನದಿ ನೀರು ಇಳಿಕೆಯಾಗಿಲ್ಲ.

ಸಿದ್ದಾಪುರದ ಕರಡಿಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕರಡಿಗೋಡು ಮತ್ತು ಬೆಟ್ಟದಕಾಡು ವಿನ ಕಾವೇರಿ ನದಿ ದಡದ 5 ಕುಟುಂಬ ಗಳು ತಾತ್ಕಾಲಿಕವಾಗಿ ಸ್ಥಳಾಂತರವಾ ಗಿದ್ದು, 6 ಮನೆಗಳ ಗೋಡೆಗಳು ನದಿ ನೀರಿನ ತೇವಾಂಶದಿಂದ ಶಿಥಿಲಗೊಂಡ ಬಗ್ಗೆ ವರದಿಯಾಗಿದೆ.

ಮೂರ್ನಾಡು ಸಮೀಪದ ಬಲಮುರಿ ಕೆಳ ಸೇತುವೆ ಕಳೆದ 40 ದಿನಗಳಿಂದ ಮುಳು ಗಿದ ಸ್ಥಿತಿಯಲ್ಲಿದ್ದು, ಕದನೂರು ಬಳಿ ಗದ್ದೆ ಮತ್ತು ಕಾಫಿ ತೋಟಗಳಿಗೆ ನೀರು ನುಗ್ಗಿದೆ. ಕದನೂರು ನದಿ ಪಾತ್ರ ಸಮುದ್ರದಂತಾ ಗಿದ್ದು, ನೀರಿನಿಂದ ಆವೃತವಾದ ಕಾಫಿ ತೋಟಗಳಲ್ಲಿ ಕಾಫಿ ಉದುರಲು ಪ್ರಾರಂ ಭವಾಗಿದ್ದು, ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಗಣಿಸಿದೆ.

ಜಿಲ್ಲೆಯ ಗ್ರಾಮೀಣ ಭಾಗಗಳ ಕಾಫಿ ತೋಟ ಮತ್ತು ರಸ್ತೆ ಬದಿ ಯಲ್ಲಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಾದ್ಯಂತ ಗಾಳಿ ಸಹಿತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಶನಿವಾರವೂ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ 25 ವರ್ಷ ಗಳ ಬಳಿಕ ಈ ಬಾರಿಯ ಮುಂಗಾರಿನಲ್ಲಿ ದಾಖಲೆಯ ಮಳೆ ಸುರಿಯುತ್ತಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಭಾರಿ ಹಾನಿಯಾಗಿದೆ.

Translate »